....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Monday, 22 June 2015

2015-16 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ

      2015-16 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯು ಜರಗಿತು. ಕಾರ್ಯಕ್ರಮದಲ್ಲಿ ಕಳೆದ ಶೈಕ್ಶಣಿಕ ವರ್ಷದಲ್ಲಿ ಪಿ.ಟಿ.ಎ ಅಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ್, ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ವರದಿ ಮಂಡಿಸಿದರು. 2015-16 ನೇ ಸಾಲಿನ ಶಾಲಾ ರಕ್ಷಕ-ಶಿಕ್ಷಕ ಸಂಘದ ನೂತನ ಕಮಿಟಿ ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀ ಸದಾಶಿವ ಕಣ್ವತೀರ್ಥ, ಉಪಾಧ್ಯಕ್ಷೆಯಾಗಿ ಶ್ರೀಮತಿ ತಿರುಮಲೇಶ್ವರಿ ಭಟ್ ಅವಿರೋಧವಾಗಿ ಆಯ್ಕೆಯಾದರು. ಬಳಿಕ ನಡೆದ ಮಾತೃ ಸಂಘದ ಸಭೆಯಲ್ಲಿ ಈ ವರ್ಷದ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಕಮರುನ್ನೀಸ ತೂಮಿನಾಡು, ಉಪಾಧ್ಯಕ್ಷೆಯಾಗಿ ಶ್ರೀಮತಿ ಮಮತಾ ಕುಚ್ಚಿಕ್ಕಾಡು ಅವಿರೋಧವಾಗಿ ಆಯ್ಕೆಯಾದರು.



ಶಾಲಾ ಮಟ್ಟದ ಯೋಗ ತರಭೇತಿಗೆ ಚಾಲನೆ

      ದೇಶವು ಮೊದಲ ವಿಶ್ವ ಯೋಗ ದಿನದ (ಜೂನ್ 21) ಆಚರಣೆಯ ಸಂಭ್ರಮದಲ್ಲಿರುವ ಸಂದರ್ಭದಲ್ಲೆ ನಮ್ಮ ಶಾಲೆಯಲ್ಲೂ ಶಾಲಾ ಮಕ್ಕಳಿಗೆ ಯೋಗ ತರಭೇತಿಯನ್ನು ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಯೋಗ ಸಾಧಕಿ ಶ್ರೀಮತಿ ಗಿರಿಜ ಯನ್ ಉದ್ಯಾವರ್'ರವರಿಂದ ಶಾಲಾ ಮಟ್ಟದ ಯೋಗ ತರಭೇತಿಗೆ ಚಾಲನೆ ನೀಡಿದರು.



ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಕಲಿಕೋಪಕರಣಗಳ ವಿತರಣೆ

       ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮ ಇಂದು ಜರಗಿತು.
       ಕಾರ್ಯಕ್ರಮದ ಉದ್ಘಾಟನೆಯನ್ನು ಮಂಜೇಶ್ವರ ಪಂಚಾಯತಿನ ಸದಸ್ಯ ಶ್ರೀ ಪವನ್ ಕುಮಾರ್ ಅಂಜರೆ ನೆರವೇರಿಸಿದರು. ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್ ಪಿ ಉದ್ಯಾವರ್ ವಹಿಸಿದ್ದರು. ಶ್ರೀ ವಿಶಾಲ್ ಕೆ ಬೆಂಗರೆಯವರು ಶಾಲೆಯ ಎಲ್ಲಾ ಮಕ್ಕಳಿಗೆ ನೀಡಿದ ಉಚಿತ ಪುಸ್ತಕ ಹಾಗೂ ಕಲಿಕೋಪಕರಣಗಳನ್ನು ಶ್ರೀ ಕೃಷ್ಣಪ್ಪ ಬೆಂಗರೆ ಹಾಗೂ ಶ್ರೀಮತಿ ಶಾಲಿನಿ ಕೆ ಬೆಂಗರೆ ದಂಪತಿ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ ಶ್ರೀನಿವಾಸ್ ಭಟ್ ಕಣ್ವತೀರ್ಥ, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್, ಯೋಗ ಸಾಧಕಿ ಶ್ರೀಮತಿ ಗಿರಿಜಾ ಯನ್ ಉದ್ಯಾವರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2014-15 ನೇ ಸಾಲಿನ ಒಂದನೇ ತರಗತಿ ಮಕ್ಕಳಿಗೆ ಸರಕಾರದಿಂದ ದೊರಕಿದ ಸಮವಸ್ತ್ರವನ್ನು ವಾರ್ಡ್ ಸದಸ್ಯ ಶ್ರೀ ಪವನ್ ಕುಮಾರ್ ಅಂಜರೆ ವಿತರಿಸಿದರು. ಶಾಲೆಯ ಉಳಿದ ಮಕ್ಕಳಿಗೆ ಸಮವಸ್ತ್ರವನ್ನು ಶಾಲಾ ಆಡಳಿತ ಸಮಿತಿ ನೀಡುವುದೆಂದು ಭರವಸೆ ನೀಡಲಾಯಿತು.
       ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಸ್ವಾಗತಿಸಿ, ಅಧ್ಯಾಪಿಕೆ ಶ್ರೀಮತಿ ಗೀತಾ ಎ ವಂದಿಸಿದರು. ಅಧ್ಯಾಪಕ ಜಯಪ್ರಶಾಂತ್ ಪಿ ಕಾರ್ಯಕ್ರಮ ನಿರೂಪಿಸಿದರು.









Friday, 19 June 2015

ನೋಟೀಸು


ವಾಚನ ದಿನಾಚರಣೆ

           ಪಿ. ಯನ್ ಪಣಿಕ್ಕರ್'ರವರ ಚರಮ ದಿನವಾದ ಜೂನ್ 19 ನ್ನು ಶಾಲೆಯಲ್ಲಿ ವಾಚನ ದಿನವನ್ನಾಗಿ ಆಚರಿಸಲಾಯಿತು. ಆ ಪ್ರಯುಕ್ತ ಪುಸ್ತಕ ಪ್ರದರ್ಶನ ಏರ್ಪಡಿಸಲಾಯಿತು. ಮಕ್ಕಳಿಗೆ ಓದುವಿಕೆಗೆ ಅವಕಾಶವನ್ನು ನೀಡುವುದರ ಜೊತೆಗೆ ಓದಿನ ಟಿಪ್ಪಣಿ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಮುಂದಿನ ಒಂದು ವಾರಗಳ ಕಾಲ ವಾಚನ ವಾರವನ್ನಾಗಿ ಆಚರಿಸಲಾಗುವುದು.