....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Saturday, 15 August 2015

69 ನೇ ಸ್ವಾತಂತ್ರ್ಯೋತ್ಸವ ಆಚರಣೆ

      ನಮ್ಮ ಶಾಲೆಯಲ್ಲಿ 69 ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಸಡಗರದಿಂದ ಆಚರಿಸಲಾಯಿತು. ಆ ಪ್ರಯುಕ್ತ ವಿವಿಧ ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಿಯರನ್ನೊಳಗೊಂಡ ಆಕರ್ಷಕ ಮೆರವಣಿಗೆಯನ್ನು ನಡೆಸಲಾಯಿತು. ಬಳಿಕ ನಡೆದ ಧ್ವಜಾರೋಹಣವನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ ನೆರವೇರಿಸಿದರು. ಈ ಸಂದರ್ಭದಲ್ಲಿ ವಾರ್ಡ್ ಸದಸ್ಯ ಶ್ರೀ ಪವನ್ ಕುಮಾರ್ ಅಂಜರೆ ಶುಭ ಕೋರಿದರು.
      ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್ ಪಿ ಉದ್ಯಾವರ್ ವಹಿಸಿದರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ, ಕಾರ್ಯದರ್ಶಿ ಶ್ರೀ ವಿಶ್ವನಾಥ್ ಸಿ ಉದ್ಯಾವರ್, ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ ಹಾಗೂ ಹಿತೈಷಿ ಶ್ರೀ ಶ್ರೀನಿವಾಸ್ ಭಟ್ ಕಣ್ವತೀರ್ಥ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಶ್ರೀ ಆನಂದ ಎಸ್ ಉದ್ಯಾವರ್ ಹಾಗೂ ಶ್ರೀ ಉದಯ್ ಉದ್ಯಾವರ್ ಮಾತನಾಡಿ ಶುಭ ಕೋರಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಗೀತಾ ಎ ವಂದಿಸಿದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಕಾರ್ಯಕ್ರಮ ನಿರೂಪಿಸಿದರು.
        ಬಳಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.
































Friday, 14 August 2015

69 ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು

ಎಲ್ಲರಿಗೂ 69 ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು.


Monday, 10 August 2015

ಕನ್ನಡ ದಿಗ್ಗಜಗೆ ಆದರಾಂಜಲಿ

       ಜನ್ಮಶತಾಬ್ಧಿಯನ್ನು ಇತ್ತೀಚೆಗಷ್ಟೆ ಆಚರಿಸಿ ಶತಮಾನದ ಗಾನವನ್ನು ಹರಿಸಿ ಕನ್ನಡಾಭಿಮನವನ್ನು ಮೇರೆತ್ತರಕ್ಕೆ ಏರಿಸಿದ ಕನ್ನಡ ಸಾಹಿತ್ಯ ಲೋಕದ ಮಿನುಗು ನಕ್ಷತ್ರ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಯವರು ನಮ್ಮನ್ನೆಲ್ಲ ಅಗಲಿದ್ದಾರೆ. ಅಗಲಿದ ದಿವ್ಯಾತ್ಮಕ್ಕೆ ಚಿರಶಾಂತಿಯನ್ನು ಕೋರಿ ಶಾಲೆಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಮತ್ತು ಶಿಕ್ಷಕ ವೃಂದ ಹಾಗೂ ಶಾಲಾ ವಿದ್ಯಾರ್ಥಿ ನಾಯಕರಾದ ಕುಮಾರಿ ನಿಹಾ ಫಾತಿಮ ಹಾಗೂ ಕೀರ್ತನ್ ಪುಷ್ಪಾರ್ಚನೆಗೈದು ನಮನವನ್ನು ಸಲ್ಲಿಸಿದರು.

ಭಾವಪೂರ್ಣ ಶ್ರದ್ಧಾಂಜಲಿ

ಕನ್ನಡ ಸಾರಸ್ವತ ಲೋಕದ ದಿಗ್ಗಜ, ಪಂಪ ಪ್ರಶಸ್ತಿ ಪುರಸ್ಕೃತ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಯವರ ಅಗಲಿಕೆ ಕನ್ನಡ ನಾಡಿಗೆ ತುಂಬಲಾರದ ನಷ್ಟ. ತನ್ನ ಕೊನೆ ಉಸಿರಿನ ತನಕ ಕನ್ನಡಕ್ಕಾಗಿಯೇ ತುಡಿಯುತ್ತಿದ್ದ ತುಳುನಾಡಿನ ಅಪ್ಪಟ ಕನ್ನಡಾಭಿಮಾನಿಗೆ ನಮ್ಮ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ ಹಾಗೂ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಭಾವಪೂರ್ಣ ಶ್ರದ್ಧಾಂಜಲಿ. ಅಗಲಿದ ದಿವ್ಯಾತ್ಮಕ್ಕೆ ಭಗವಂತನು ಚಿರಶಾಂತಿಯನ್ನು ನೀಡಲಿ...

Thursday, 6 August 2015

ಉಚಿತ ಸಮವಸ್ತ್ರ ವಿತರಣೆ


         2015-16 ನೇ ಸಾಲಿನ ಶೈಕ್ಷಣಿಕ ವರ್ಷದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸರಕಾರದಿಂದ ದೊರಕಿದ ಉಚಿತ ಸಮವಸ್ತ್ರದ ವಿತರಣಾ ಕಾರ್ಯಕ್ರಮ ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ ರವರ ಅಧ್ಯಕ್ಷತೆಯಲ್ಲಿ ಜರಗಿತು. ಕಾರ್ಯಕ್ರಮದಲ್ಲಿ ಮಾತೃ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಮಮತಾ ಕುಚ್ಚಿಕ್ಕಾಡು, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ, ಶಾಲಾ ಹಿರಿಯ ಅಧ್ಯಾಪಕ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಸ್ವಾಗತಿಸಿ, ಅಧ್ಯಾಪಿಕೆ ಶ್ರೀಮತಿ ಗೀತಾ ವಂದಿಸಿದರು.






ಹಿರೋಶಿಮ ದಿನಾಚರಣೆ

      ಹಿರೋಶಿಮ ದಿನಾಚರಣೆಯ ಅಂಗವಾಗಿ ಇಂದು ಯುದ್ಧ ವಿರೋಧಿ ರಾಲಿಯನ್ನು ನಡೆಸಲಾಯಿತು. ಹಿರೋಶಿಮ ದಿನಾಚರಣೆಯ ಕುರಿತು ಅಧ್ಯಾಪಕ ಶ್ರೀ ಜಯಪ್ರಶಾಂತ್ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.