....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Saturday, 5 September 2015

ಶಿಕ್ಷಕರ ದಿನಾಚರಣೆಯ ಶುಭಾಶಯಗಳು...

              ಒಂದೊಳ್ಳೆ ಗುರಿಯನ್ನು ತಲುಪಲು ಒಬ್ಬ ಗುರುವಿನ ಮಾರ್ಗದರ್ಶನ ಅತಿ ಮುಖ್ಯ. ವಿದ್ಯಾರ್ಥಿ ಜೀವನದಲ್ಲಿ ಅಧ್ಯಾಪಕ ಪ್ರಮುಖ ಪಾತ್ರ ವಹಿಸುತ್ತಾನೆ. ಜಗತ್ತಲ್ಲಿ ಕೆಟ್ಟ ತಂದೆ-ತಾಯಿ ಇರಲಾರರು ಎಂಬುದು ಎಷ್ಟು ಸತ್ಯವೋ ಕೆಟ್ಟ ಅಧ್ಯಾಪರೂ ಇರಲಾರರು ಎಂಬುದು ಅಷ್ಟೆ ಸತ್ಯ. ಇದ್ದರೂ ಅವರು ಆ ಸ್ಥಾನಕ್ಕೆ ಅರ್ಹರಲ್ಲ.
ಭಾರತ ಕಂಡ ನೆಚ್ಚಿನ ಅಧ್ಯಾಪಕರಲ್ಲಿ ಡಾ. ಸರ್ವಪಳ್ಳಿ ರಾಧಾಕೃಷ್ಣನ್ ಪ್ರಮುಖರೆನಿಸುತ್ತಾರೆ. 1888 ಸಪ್ಟಂಬರ್ 5 ರಂದು ತಮಿಳುನಾಡಿನ ತಿರುತ್ತಣಿ ಎಂಬಲ್ಲಿ ಸರ್ವಪಳ್ಳಿ ವೀರಸ್ವಾಮಿ ಹಾಗೂ ಸೀತಮ್ಮ ದಂಪತಿಗೆ ಹುಟ್ಟಿದ ಸರ್ಪಳ್ಳಿ ರಾಧಾಕೃಷ್ಣನ್ ತನ್ನ ನೆಚ್ಟಿನ ಅಧ್ಯಾಪನ ವೃತ್ತಿಯನ್ನೆ ಆಯ್ಕೆ ಮಾಡಿಕೊಂಡರು. ಅದರಲ್ಲೆ ಹಂತ-ಹಂತವಾಗಿ ಮೇಲೇರಿದ ರಾಧಾಕೃಷ್ಣನ್ 1952 ರಲ್ಲಿ ದೇಶದ ಮೊದಲ ಉಪರಾಷ್ಟ್ರಪತಿಯಾಗಿ ಆಯ್ಕೆಯಾದರು. ಇದೇ ಸಮಯದಲ್ಲಿ ದೇಶದ ಅತ್ಯುನ್ನತ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯು ಲಭಿಸಿತು. ಡಾ. ರಾಜೇಂದ್ರ ಪ್ರಸಾದ್ ನಂತರ 1962ರಲ್ಲಿ ಭಾರತದ ಮೊದಲ ಪ್ರಜೆಯಾಗಿ ಅತ್ಯುನ್ನತ ರಾಷ್ಟ್ರಪತಿ ಹುದ್ದೆಯನ್ನಲಂಕರಿಸಿದರು.
ತನ್ನ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಆಚರಿಸಬೇಕೆಂಬ ಇಂಗಿತವನ್ನು ಹೊಂದಿದ್ದ ಎಸ್. ರಾಧಾಕೃಷ್ಣನ್ ಅವರ ಮಹದಾಸೆಯಂತೆ ಸೆಪ್ಟಂಬರ್ 5 ನ್ನು 'ಶಿಕ್ಷಕರ ದಿನ'ವನ್ನಾಗಿ ದೇಶದೆಲ್ಲೆಡೆ ಆಚರಿಸಲಾಗುತ್ತಿದೆ.
ಮಕ್ಕಳ ಉಜ್ವಲ ಭವಿಷ್ಯವನ್ನು ರೂಪಿಸುವುದರೊಂದಿಗೆ ದೇಶಕ್ಕೆ ಸಮರ್ಥ ಪ್ರಜೆಗಳನ್ನು ನೀಡುವ ಜವಾಬ್ದಾರಿಯನ್ನು ಹೂತ್ತಿರುವ ಗೌರವಯುತ ಅಧ್ಯಾಪಕ ಬಂಧುಗಳಿಗೆ 'ಶಿಕ್ಷಕ ದಿನಾಚರಣೆ'ಯ ಹಾರ್ದಿಕ ಶುಭಾಶಯಗಳು....

Friday, 4 September 2015

ಜನ್ಮಾಷ್ಟಮಿಯ ಶುಭಾಶಯಗಳು

ಎಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು...

Thursday, 3 September 2015

ತರಕಾರಿ ಬೀಜ ವಿತರಣೆ

           ಕೃಷಿ ಇಲಾಖೆಯಿಂದ ದೊರೆತ ತರಕಾರಿ ಬೀಜಗಳ ವಿತರಣೆಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಶಾಲೆಯ ಎಲ್ಲಾ ಮಕ್ಕಳಿಗೆ ವಿತರಿಸಿದರು.


Wednesday, 2 September 2015

ಕಂಪ್ಯೂಟರ್ ಕೊಡುಗೆ

          ಶ್ರೀ ಸುದರ್ಶನ್ ಬಾನು ಉದ್ಯಾವರ್ ಇವರು ನಮ್ಮ ಶಾಲೆಗೆ ಒಂದು ಕಂಪ್ಯೂಟರ್'ನ್ನು ಉದಾರವಾಗಿ ನೀಡಿದ್ದಾರೆ. ಅವರಿಗೆ ನಮ್ಮ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರಿಂದ ಅನಂತಾನಂತ ಧನ್ಯವಾದಗಳು..


Sunday, 30 August 2015

ರಕ್ಷಾ ಬಂಧನದ ಶುಭಾಶಯಗಳು

ಎಲ್ಲರಿಗೂ ರಕ್ಷಾಬಂಧನದ ಹಾರ್ದಿಕ ಶುಭಾಶಯಗಳು

Thursday, 27 August 2015

ಓಣಂ ಶುಭಾಶಯ

ನಾಡಿನ ಸಮಸ್ತ ಜನತೆಗೆ ಓಣಂ ಹಬ್ಬದ ಹಾರ್ದಿಕ ಶುಭಾಶಯಗಳು

Friday, 21 August 2015

ಸಂಭ್ರಮದ ಓಣಂ ಆಚರಣೆ

         ನಮ್ಮ ಶಾಲೆಯಲ್ಲಿ ಓಣಂ ಆಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಹೂವಿನ ರಂಗೋಲಿಯನ್ನು ರಚಿಸಲಾಯಿತು. ಶಾಲಾ ವಿದ್ಯಾರ್ಥಿ ಸೃತನ್ ಕುಮಾರ್ ಹಾಕಿದ ಮಾವೇಲಿ ವೇಷ ಎಲ್ಲರ ಗಮನ ಸೆಳೆಯಿತು. ಮಧ್ಯಾಹ್ನ ಬಗೆ ಬಗೆಯ ಪದಾರ್ಥ, ಪಾಯಸದ 'ಓಣಂ ಸದ್ಯ'ವನ್ನು ಎಲ್ಲರೂ ಸವಿದರು. ಶಾಲಾ ಮಕ್ಕಳಿಗೆ ಹಾಗೂ ಅಧ್ಯಾಪಕರಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಶಾಲಾ ಪಿ.ಟಿ.ಎ ಸಹಕರಿಸಿದರು.