....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Thursday, 31 March 2016

2015-16 ನೇ ಸಾಲಿನ ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ

         2015-16 ನೇ ಸಾಲಿನ ಶೈಕ್ಷಣಿಕ ವರ್ಷದ ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ತಾ. 31-03-2016 ನೇ ಗುರುವಾರದಂದು ನಡೆಸಲಾಯಿತು. ಈ ಸಮಾರಂಭದಲ್ಲಿ ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್ ಪಿ ಉದ್ಯಾವರ್, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ, ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ, ಶ್ರೀಮತಿ ಶಾಲಿನಿ ಕೆ ಬೆಂಗರೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಅಧ್ಯಾಪಕರಾದ ಅಬ್ದುಲ್ ಮಜೀದ್, ಜಯಪ್ರಶಾಂತ್ ಪಿ, ಭವ್ಯಶ್ರೀ ಯನ್ ಹಾಗೂ ಗೀತಾ ಎ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣಪ್ಪ ಬೆಂಗರೆಯವರು ವರ್ಷಂಪ್ರತಿ ನೀಡುವಂತೆ ಈ ವರ್ಷವೂ ನಾಲ್ಕನೇ ತರಗತಿಯ ಎಲ್ಲಾ ಮಕ್ಕಳಿಗೆ ಕಥೆ ಪುಸ್ತಕ ಹಾಗೂ ಸಿಹಿ ತಿಂಡಿಯನ್ನು ನೀಡಿದರು. ಮಕ್ಕಳು ತಮ್ಮ ಶಾಲಾ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಂಡು ತಮ್ಮ ಶಾಲಾಭಿಮಾನವನ್ನು ಎತ್ತಿ ಹಿಡಿದರು. ಬೀಳ್ಕೊಡುಗೆಯ ಸಂದರ್ಭದಲ್ಲಿ ಮಕ್ಕಳ ಕಣ್ಣಂಚಲ್ಲಿ ಸುರಿದ ಕಣ್ಣೀರು ಎಲ್ಲರನ್ನು ಮೂಕರನ್ನಾಗಿಸಿತು.
" ನಿಮ್ಮ ಮುಂದಿನ ಶೈಕ್ಷಣಿಕ ಜೀವನವೂ ಯಶಸ್ವಿಯಾಗಿ ಸಾಗಿ ಕೀರ್ತಿ ತರುವಂತಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತಿದ್ದೇವೆ"
"ಶುಭವಾಗಲಿ"















Monday, 28 March 2016

2015-16 ನೇ ಸಾಲಿನ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು

2015-16 ನೇ ಸಾಲಿನ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಶಾಲಾ ಶಿಕ್ಷಕ ವೃಂದ..

1 ನೇ ತರಗತಿ

 2 ನೇ ತರಗತಿ

 3 ನೇ ತರಗತಿ

 4 ನೇ ತರಗತಿ

 ಶಾಲಾ ಅಧ್ಯಾಪಕ ವೃಂದ


Saturday, 13 February 2016

School day

ಶಾಲಾ ವಾರ್ಷಿಕೋತ್ಸವ

                 ನಮ್ಮ ಶಾಲಾ ವಾರ್ಷಿಕೋತ್ಸವವು ತಾ. 12-02-2016 ನೇ ಶುಕ್ರವಾರದಂದು ವಿಜೃ0ಭಣೆಯಿಂದ ಜರಗಿತು. ಬೆಳಗ್ಗೆ ನಡೆದ ಧ್ವಜಾರೋಹಣವನ್ನು ನಿವೃತ್ತ ಅಧ್ಯಾಪಿಕೆ ಶ್ರೀಮತಿ ಲಕ್ಷ್ಮೀ ಐಲ್ ರವರು ನೆರವೇರಿಸಿದರು. ಬಳಿಕ ಎಲ್ಲರಿಗೂ ಬೆಳಗಿನ ಉಪಹಾರವನ್ನು ನೀಡಲಾಯಿತು. ಮಧ್ಯಾಹ್ನ ಭೂರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
            ಮಧ್ಯಾಹ್ನ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ಶ್ರೀ ನಂದಿಕೇಶನ್ ಯನ್ ರವರು ವಹಿಸಿದ್ದರು. ಕಾರ್ಯಕ್ರಮವನ್ನು ಮಂಜೇಶ್ವರ ಪಂಚಾಯತ್ ಸದಸ್ಯೆ ಶ್ರೀಮತಿ ಶಶಿಕಲಾರವರು ಉದ್ಘಾಟಿಸಿದರು. ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ, ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಾಲಾ ಕ್ರೀಡೋತ್ಸವದ ವಿಜೇತರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್ ಪಿ ಉದ್ಯಾವರ್ ವಿತರಿಸಿದರು. ಶಾಲಾ ವಾರ್ಷಿಕ ವರದಿಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಮಂಡಿಸಿದರು. ಶಾಲಾ ಅಧ್ಯಾಪಿಕೆ ಶ್ರೀಮತಿ ಭವ್ಯಶ್ರೀ ಯನ್ ಸ್ವಾಗತಿಸಿ, ಶ್ರೀಮತಿ ಗೀತಾ ಎ ವಂದಿಸಿದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಕಾರ್ಯಕ್ರಮ ನಿರೂಪಿಸಿದರು.
        ಬಳಿಕ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.






















Friday, 5 February 2016

ಶಾಲಾ ಕ್ರೀಡಾಕೂಟ

              ನಮ್ಮ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಕ್ರೀಡಾಕೂಟವು ತಾ. 05-02-2016 ನೇ ಶುಕ್ರವಾದಂದು ನಡೆಯಿತು. ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರನ್ನು ಆರಿಸಲಾಯಿತು. ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥರವರು ಉಪಸ್ಥಿತರಿದ್ದು ಸಹಕರಿಸಿದರು. ಎಲ್ಲರಿಗೂ ಪಾನೀಯ ಹಾಗೂ ಬಿಸ್ಕತ್ತುಗಳನ್ನು ನೀಡಲಾಯಿತು.