....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Monday 22 September 2014

ಪಿ.ಟಿ.ಎ ಹಾಗೂ ಕ್ಲಾಸ್ ಪಿ.ಟಿ.ಎ ಸಭೆ...

          ನಮ್ಮ ಶಾಲೆಯಲ್ಲಿ ಕಾಲು ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ವಿತರಣೆ ಹಾಗೂ ಮಕ್ಕಳ ಕಲಿಕಾ ಪುರೋಗತಿಯ ಕುರಿತು ಮಕ್ಕಳ ಹೆತ್ತವರೊಂದಿಗೆ ಚರ್ಚಿಸಲು ಪಿ.ಟಿ.ಎ ಹಾಗೂ ಕ್ಲಾಸ್ ಪಿ.ಟಿ.ಎ ಸಭೆಯು ತಾ. 22-09-2014 ನೇ ಸೋಮವಾರದಂದು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಲಜಾಕ್ಷಿ ಎ ಮಕ್ಕಳ ಹೆತ್ತವರಿಗೆ ಉಪಜಿಲ್ಲಾ ಮಟ್ಟದಲ್ಲಿ ಮುಂದೆ ಬರುವ ವಿವಿಧ ಸ್ಪರ್ಧೆಗಳ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾ ಪ್ರಬಂದಕ ಶ್ರೀ ವಿಶ್ವನಾಥ ಪಿ ಉದ್ಯಾವರ್, ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ, ಉದ್ಯಾವರ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಬೆಂಗರೆ, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್,  ಮಾತೃ ಸಂಘದ ಅಧ್ಯಕ್ಷೆ ಹೇಮಾವತಿ ಉಪಸ್ಥಿತರಿದ್ದರು.





ಶಾಲಾ ಬ್ಲಾಗ್'ನ ಉದ್ಘಾಟನೆ...

           ನಮ್ಮ ಶಾಲಾ ಬ್ಲಾಗ್'ನ ಉದ್ಘಾಟನಾ ಕಾರ್ಯಕ್ರಮವು ತಾ. 22-09-2014 ನೇ ಸೋಮವಾರದಂದು ನಡೆಯಿತು. ಉದ್ಘಾಟನೆಯನ್ನು ದ್ಯಾವರ ಬೋವಿ ವಿದ್ಯಾದಾಯಿನಿ ಸಂಘ, ಉದ್ಯಾವರ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಬೆಂಗರೆಯವರು ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್ ಪಿ ಉದ್ಯಾವರ್ ವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಲಜಾಕ್ಷಿ ಎ, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್, ಮಾತೃ ಸಂಘದ ಅಧ್ಯಕ್ಷೆ ಹೇಮಾವತಿ ಉಪಸ್ಥಿತರಿದ್ದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು ಸ್ವಾಗತಿಸಿ,  ಶಾಲಾ ಅಧ್ಯಾಪಿಕೆಯಾದ  ಶ್ರೀಮತಿ ಗೀತಾ ಎ ವಂದಿಸಿದರು.




ವಿಸ್ಮಯ ಜಾದೂ ಪ್ರದರ್ಶನ

                  ನಮ್ಮ ಶಾಲೆಯಲ್ಲಿ ತಾ. 22-09-2014 ನೇ ಸೋಮವಾರದಂದು ಉಡುಪಿಯ ಪಾಂಗಾಲ ಶ್ರೀ ಗೋಪಾಲಕೃಷ್ಣ ಶೆಣೈಯವರಿಂದ ವಿಸ್ಮಯ ಜಾದೂ ಪ್ರದರ್ಶನ ನಡೆಯಿತು. ಸುಮಾರು 30-40 ಬಗೆಯ ವಿವಿಧ ರೀತಿಯ ಮ್ಯಾಜಿಕ್ ತಂತ್ರಗಳು ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿತು. ಸುಮಾರು ಒಂದು ಗಂಟೆಯಷ್ಟು ಕಾಲ ನಡೆದ ಈ ಪ್ರದರ್ಶನ ಎಲ್ಲರ  ಮೆಚ್ಚುಗೆಗೆ ಪಾತ್ರವಾಯಿತು.







Saturday 6 September 2014

'ಚಿನ್ನರ ಚಿಲಿಪಿಲಿ' - 'ಸಾಕ್ಷರ 2014' ಒಂದು ದಿನದ ಸೃಜನಾತ್ಮಕ ಶಿಬಿರ




           ಸಾಕ್ಷರ 2014 ಇದರ ಮೊದಲ ಹಂತದ ಭಾಗವಾಗಿ ಒಂದು ದಿನದ ಸೃಜನಾತ್ಮಕ ಶಿಬಿರವನ್ನು ತಾ. 06-09-2014 ನೇ ಶನಿವಾರದಂದು ನಮ್ಮ ಶಾಲೆಯಲ್ಲಿ ನಡೆಸಲಾಯಿತು. ಬೆಳಿಗ್ಗೆ 09:30 ಕ್ಕೆ ಸರಿಯಾಗಿ ಶಿಬಿರಾರ್ಥಿಗಳ ನೊಂದಾವಣೆ ಪ್ರಕ್ರಿಯೆಯನ್ನು   ಆರಂಭಿಸಲಾಯಿತು. ಬಳಿಕ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉದ್ಘಾಟನೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್ ನೆರವೇರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಉಪಸ್ಥಿತರಿದ್ದರು. ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು ಸ್ವಾಗತಿಸಿ,  ಅಧ್ಯಾಪಿಕೆ  ಶ್ರೀಮತಿ ಗೀತಾ ಎ ವಂದಿಸಿದರು.  ಬಳಿಕ ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಹಾಗೂ  ಅಧ್ಯಾಪಿಕೆ ಶ್ರೀಮತಿ ಗೀತಾ ಎ ರವರು ಶಿಬಿರದ ತರಗತಿಯನ್ನು ಪ್ರಾರಂಭಿಸಿದರು. ಹಲವಾರು  ಸೃಜನಾತ್ಮಕವಾದ ಚಟುವಟಿಕೆಗಳನ್ನು ನೀಡಲಾಯಿತು. ಮಕ್ಕಳೆಲ್ಲರೂ ಬಹಳ ಉತ್ಸಾಹದಿಂದ ಪಾಲ್ಗೊಂಡು ಶಿಬಿರದ ಯಶಸ್ಸಿಗೆ ಕಾರಣರಾದರು.

















Friday 5 September 2014

ಶಿಕ್ಷಕರ ದಿನಾಚರಣೆ....


               ತಾ. 05-09-2014 ನೇ ಶುಕ್ರವಾರದಂದು ಸರ್ವಪಳ್ಳಿ ರಾಧಾಕೃಷ್ಣನ್'ರವರ ಜನ್ಮದಿನಾಚರಣೆಯನ್ನು 'ಶಿಕ್ಷಕರ ದಿನ'ವನ್ನಾಗಿ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಸರ್ವಪಳ್ಳಿ ರಾಧಾಕೃಷ್ಣನ್'ರವರ ಭಾವಚಿತ್ರ  ಪ್ರದರ್ಶಿಸಿ  ಅವರ ವ್ಯಕ್ತಿ ಪರಿಚಯ ಹಾಗೂ ಜೀವನ ಸಾಧನೆಯನ್ನು  ಮಕ್ಕಳಿಗೆ ತಿಳಿಸಲಾಯಿತು. ಶಾಲಾ ನಾಯಕ-ನಾಯಕಿಯರಾದ ವಿಶ್ಮಿತ, ದೀರಜ್, ಪವನ್ ಕುಮಾರ್, ನಂದಿನಿ ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಲಜಾಕ್ಷಿ ಎ ಹಾಗೂ ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಹೂ ನೀಡುವುದರ ಮೂಲಕ ಶುಭ ಕೋರಿದರು. ಮಕ್ಕಳು ಶಾಲಾ ಶಿಕ್ಷಕ-ಶಿಕ್ಷಕಿಯರಿಗೆ ಕೆಲವು ಸ್ಪರ್ಧೆಗಳನ್ನು ಏರ್ಪಡಿಸಿದ್ದರು. 






ಸಂಭ್ರಮದ ಓಣಂ ಆಚರಣೆ....


              ಕೇರಳದ ನಾಡ ಹಬ್ಬವಾದ ಓಣಂ ಆಚರಣೆಯನ್ನು ನಮ್ಮ ಶಾಲೆಯಲ್ಲಿ ತಾ. 05-09-2014 ನೇ ಶುಕ್ರವಾರದಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಗೆ ಹೂವಿನ ರಂಗೋಲಿ ಬಿಡಿಸುವ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಶಾಲಾ ವಿದ್ಯಾರ್ಥಿ ಪವನ್ ಕುಮಾರ್ ಹಾಕಿದ ಮಾವೇಲಿ ವೇಷ ಎಲ್ಲರ ಗಮನ ಸೆಳೆಯಿತು. ಬಳಿಕ ಶಾಲಾ ವಿದ್ಯಾರ್ಥಿನಿಯರು ನಡೆಸಿಕೊಟ್ಟ ತಿರುವಾದಿರ ನೃತ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಮದ್ಯಾಹ್ನ ಹಬ್ಬದ ಪ್ರಯುಕ್ತ 'ಓಣಂ ಸದ್ಯ' ತಯಾರಿಸಲಾಗಿತ್ತು. ಮಕ್ಕಳು ಪಾಯಸದೂಟವನ್ನು ಬಹಳ ಸಂಭ್ರಮದಿಂದ ಸವಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಲಜಾಕ್ಷಿ ಎ, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್, ಉಪಾಧ್ಯಕ್ಷೆ ಕಮರುನ್ನೀಸ, ಶಾಲಾ ಅಧ್ಯಾಪಿಕೆಯರಾದದ  ಶ್ರೀಮತಿ ಗೀತಾ ಎ, ಕುಮಾರಿ ಭವ್ಯಶ್ರೀ ಯನ್, ಅಧ್ಯಾಪಕರಾದ ಅಬ್ದುಲ್ ಮಜೀದ್,  ಶ್ರೀ ಜಯಪ್ರಶಾಂತ್ ಪಿ ಯವರು ಉಪಸ್ಥಿತರಿದ್ದರು.