....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Monday 30 March 2015

ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಕಾರ್ಯಕ್ರಮ

        2014-15 ನೇ ಸಾಲಿನ ನಾಲ್ಕನೇ ತರಗತಿ ಮಕ್ಕಳ ಬೀಲ್ಕೊಡುಗೆ ಕಾರ್ಯಕ್ರಮವು ತಾ. 30-03-2015 ನೇ ಸೋಮವಾರದಂದು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ, ಕೋಶಾಧಿಕಾರಿ ಶ್ರೀ ವಿಶ್ವನಾಥ್ ಸಿ ಉದ್ಯಾವರ್, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್, ಶ್ರೀಮತಿ ಶಾಲಿನಿ ಕೆ ಬೆಂಗರೆ ಹಾಗೂ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಉಪಸ್ಥಿತರಿದ್ದು ಮಕ್ಕಳಿಗೆ ಶುಭ ಹಾರೈಸಿದರು. ನಾಲ್ಕನೇ ತರಗತಿಯ ಎಲ್ಲಾ ಮಕ್ಕಳು ತಮ್ಮ ಶಾಲಾ ಜೀವನದ ಅನುಭವವನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಶಾಲಿನಿ ಕೃಷ್ಣಪ್ಪ ಬೆಂಗರೆ ದಂಪತಿ ನಾಲ್ಕನೇ ತರಗತಿಯ ಎಲ್ಲಾ ಮಕ್ಕಳಿಗೆ ಓದುವ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಎಲ್ಲರಿಗೂ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.






Friday 20 March 2015

ಯುಗಾದಿ ಶುಭಾಶಯಗಳು

*ಯುಗಾದಿ*
ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ
ಹೊಸ ವರುಷಕೆ ಹೊಸ ಹರುಷವ ಹೊಸತು,ಹೊಸತು ತರುತಿದೆ  !!
ಹೊಂಗೆ ಹೂವ ತೊಂಗಲಲ್ಲಿ
ಭೃಂಗದ ಸಂಗೀತ ಕೇಳಿ
ಮತ್ತೆ ಕೇಳ ಬರುತಿದೆ.
ಬೇವಿನಾ ಕಹಿ ಬಾಳಿನಲ್ಲಿ,
ಹೊವಿನ ನಸುಗಂಪು ಸೂಸಿ
ಜೀವ ಕಳೆಯ ತರುತಿದೆ !!
      ಈ ಯುಗಾದಿ ಎಲ್ಲರಿಗೂ ಸುಖ, ಶಾಂತಿ, ನೆಮ್ಮದಿ, ಸಮೃದ್ದಿಯ, ಜೊತೆಗೆ  ಹರುಷ ತರಲಿ.
     ಎಲ್ಲಾ  ಬಂಧುಗಳಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.

Thursday 19 March 2015

ಶಾಲಾ ಮಟ್ಟದ 'ಹಿರಿಮೆ 2014-15'

         2014-15ನೇ ಸಾಲಿನ ಶಾಲಾ ಮಟ್ಟದ 'ಹಿರಿಮೆ 2014-15' ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ ತಾ. 19-03-2015 ನೇ ಗುರುವಾರದಂದು ನಡೆಸಲಾಯಿತು. ಆ ಪ್ರಯುಕ್ತ ವಸ್ತು ಪ್ರದರ್ಶನ ನಡೆಸಲಾಯಿತು. ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮಕ್ಕಳಿಗೆ ಹಾಗೂ ರಕ್ಷಕರಿಗೆ ಕೆಲವೊಂದು ಸ್ಪರ್ಧೆಗಳನ್ನು ನಡೆಸಲಾಯಿತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು.













ಮಂಜೇಶ್ವರ ಪಂಚಾಯತ್ ಮಟ್ಟದ 'ಮೆಟ್ರಿಕ್ ಮೇಳ 2014-15'

            ಮಂಜೇಶ್ವರ ಪಂಚಾಯತ್ ಮಟ್ಟದ 'ಮೆಟ್ರಿಕ್ ಮೇಳ  2014-15' ಕಾರ್ಯಕ್ರಮವು ತಾ.18-03-2015 ಬುಧವಾರದಂದು ಮರಿಯಾಶ್ರಮ ಎ.ಎಲ್.ಪಿ ಶಾಲೆ ಕುಂಜತ್ತೂರಿನಲ್ಲಿ ಜರಗಿತು. ಈ ಕಾರ್ಯಕ್ರಮದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳಾದ ಪವನ್ ಕುಮಾರ್, ವಿಶ್ಮಿತ, ದೀರಜ್ ಆರ್ ಹಾಗೂ ನಿಹಾ ಫಾತಿಮ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ನಮ್ಮ ಶಾಲೆಯ ಮೆಟ್ರಿಕ್ ಮೇಳದ ವಸ್ತುಪ್ರದರ್ಶನವನ್ನು ನಡೆಸಲಾಯಿತು.