....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Friday 15 August 2014

ಸಂಭ್ರಮದ 68 ನೇ ಸ್ವಾತಂತ್ರ್ಯೋತ್ಸವ ಆಚರಣೆ


              ಉದ್ಯಾವರ ಭಗವತಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 68 ನೇ ಸ್ವಾತಂತ್ರ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಂದ ಆಕರ್ಷಕ ಮೆರವಣಿಗೆ ನಡೆಯಿತು. ಬಳಿಕ ನಡೆದ ಧ್ವಜಾರೋಹಣವನ್ನು ಶ್ರೀ ರಘು ಕಾರ್ನವರ್'ರವರು ನೆರವೇರಿಸಿದರು. ಮಂಜೇಶ್ವರ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಶ್ರೀ ಪವನ್ ಕುಮಾರ್ ಅಂಜರೆ ಉಪಸ್ಥಿತರಿದ್ದರು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್ ಪಿ ಉದ್ಯಾವರ್'ರವರು ವಹಿಸಿದ್ದರು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಲಜಾಕ್ಷಿ ಎ, ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ, ಉದ್ಯಾವರ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಬೆಂಗರೆ, ಶಾಲಾ ಮಾಜಿ ಪ್ರಬಂಧಕ ಶ್ರೀ ರಾಜೇಂದ್ರ ಉದ್ಯಾವರ್, ಬೋವಿ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾಲಿನಿ ಕೆ ಬೆಂಗರೆ, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಸ್ವಾತಂತ್ರ್ಯೋತ್ಸವವದ ಪ್ರಯುಕ್ತ ಶಾಲಾ ಮಕ್ಕಳಿಗೆ ನಡೆಸಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಿಸಲಾಯಿತು. ಶಾಲಾ ಅಧ್ಯಾಪಿಕೆ ಭವ್ಯ.ಶ್ರೀ ಯನ್ ಯವರು ಸ್ವಾಗತಿಸಿ,  ಶಾಲಾ ಅಧ್ಯಾಪಿಕೆಯಾದ  ಶ್ರೀಮತಿ ಗೀತಾ ಎ ವಂದಿಸಿದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು ಕಾರ್ಯಕ್ರಮ ನಡೆಸಿಕೊಟ್ಟರು.
            ಬಳಿಕ  ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ಎಲ್ಲರಿಗೂ ಲಘು ಪಾನೀಯ ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.
























Thursday 14 August 2014

ಕುಣಿಯುತ ಬಂದನು ಆಟಿಕಳಂಜ.....


ತುಳುವರ ಆಟಿ ತಿಂಗಳಲ್ಲಿ ಮನೆ ಮನೆಗೆ ಬರುವ, ಈಗಿನ ಆಧುನಿಕ ಯುಗದಲ್ಲಿ ಅಪರೂಪವೆನಿಸಿದ 'ಆಟಿಕಳಂಜ' ನಮ್ಮ ಶಾಲೆಗೆ ಬಂದಾಗ....





ಕಳೆಂಜೆ ಕಳೆಂಜೆನೋ - ಕಳೆಂಜೆ
ಏರ್'ನ ಮಗೆನೋ |
ಮಾಯತರಸುಮಗೆ - ಕಳೆಂಜೆ
ಮಾಯತಪುಟ್ಟಾಂಡೆ |
ಮಾಯತಪುಟ್ಟಾಂಡೆ - ಕಳೆಂಜೆ
ಜೋಗೊತ ಬಲೆಕ್ಕಾಂಡೆ |
ಪತ್ತೇ ಕಾಲೊಂಡ - ಕಳೆಂಜೆ
ಪದಿನಾಜಿ ಪಿರಯಾಂಡೆ |
ಪದಿನಾಜಿ ವರುಷೋಡು - ಕಳೆಂಜೆ
ಊರುದಪ್ಪೊಡೆಂದ್
ಊರುದತ್ತೆನೇ - ಕಳೆಂಜೆ
ಕುಂಬಳೆ ಸೀಮೆಗ್.......


ಈ ರೀತಿಯ ಸಂದಿ ಹಾಡಿಗೆ ಕುಣಿಯುತ್ತಾ ಬರುವ ಆಟಿಕಳಂಜ ತುಳುನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಒಂದು ಕಲಾಪ್ರಕಾರವಾಗಿದೆ. ಆಟಿ ತಿಂಗಳಲ್ಲಿ ಬರುವಂತಹ ಹಲವಾರು ರೋಗರುಜಿನಗಳು ಮನುಷ್ಯರಿಗೂ ಜಾನುವಾರುಗಳಿಗೂ ಹೆಚ್ಚಾಗಿ ಬಾಧಿಸುತ್ತದೆಯೆಂದೂ, ಇವುಗಳ ನಿವಾರಣೆಗಾಗಿ ಆಟಿಕಳಂಜನು ಬರುತ್ತಾನೆಂದು ಜನರ ನಂಬಿಕೆ.

Wednesday 6 August 2014

'ಸಾಕ್ಷರ 2014' ಉದ್ಘಾಟನೆ


         ಡಯೆಟ್ ಕಾಸರಗೋಡ್ ಆಯೋಜಿಸಿದ 'ಸಾಕ್ಷರ 2014' ಎಂಬ ವಿನೂತನ ಕಾರ್ಯಕ್ರಮಕ್ಕೆ ನಮ್ಮ ಶಾಲೆಯಲ್ಲಿ ತಾ. 06-08-2014 ನೇ ಬುಧವಾರ ಕಾರ್ಯಕ್ರಮವನ್ನು ಉದ್ಘಾಟಿಸುವುದರ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಮಂಜೇಶ್ವರ ಪಂಚಾಯತಿನ ಕ್ಷೇಮ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ಪವನ್ ಕುಮಾರ್ ಅಂಜರೆ ಚಾರ್ಟಿಗೆ ಬಣ್ಣ ಕೊಟ್ಟು ಉದ್ಘಾಟನಾ ಘೋಷಣೆಯನ್ನು ಅನಾವರಣಗೊಳಿಸುವ ಮೂಲಕ ವಿಭಿನ್ನವಾಗಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಪ್ರಬಂದಕ ಶ್ರೀ ವಿಶ್ವನಾಥ ಪಿ ಉದ್ಯಾವರ್ ವಹಿಸಿದ್ದರು. ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು 'ಸಾಕ್ಷರ 2014' ರ ಉದ್ದೇಶವನ್ನು ರಕ್ಷಕರಿಗೆ ವಿವರಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಲಜಾಕ್ಷಿ ಎ ಯವರು ಸ್ವಾಗತಿಸಿ,  ಶಾಲಾ ಅಧ್ಯಾಪಿಕೆಯಾದ  ಭವ್ಯಶ್ರೀ ಯನ್ ವಂದಿಸಿದರು.