Wednesday, 31 December 2014
Wednesday, 24 December 2014
Friday, 19 December 2014
ಕ್ರಿಸ್'ಮಸ್ ಆಚರಣೆ
ತಾ. 19-12-2014 ನೇ ಶುಕ್ರವಾರದಂದು ನಮ್ಮ ಶಾಲೆಯಲ್ಲಿ ಕ್ರಿಸ್'ಮಸ್ ಆಚರಣೆಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಸಭಾಂಗಣದಲ್ಲಿ ಕ್ರಿಸ್'ಮಸ್ ಟ್ರೀ ಹಾಗೂ ಗೋದಳಿಯನ್ನು ರಚಿಸಲಾಗಿತ್ತು. ಶಾಲಾ ವಿದ್ಯಾರ್ಥಿಗಳಾದ ಪವನ್ ಕುಮಾರ್ ಹಾಗೂ ನಿಝಾಮುದ್ದಿನ್ ಹಾಕಿದ ಕ್ರಿಸ್'ಮಸ್ ಅಜ್ಜನ ವೇಷ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಕ್ರಿಸ್'ಮಸ್ ಅಜ್ಜ ಎಲ್ಲರಿಗೂ ಕ್ರಿಸ್'ಮಸ್'ನ ಶುಭಾಶಯ ಹೇಳಿ ಚಾಕಲೇಟ್'ಗಳನ್ನು ನೀಡಿದರು. ಬಳಿಕ ಎಲ್ಲರಿಗೂ ಐಸ್'ಕ್ರೀಂ ನೀಡಲಾಯಿತು.
'ಸಾಕ್ಷರ ಘೋಷಣೆ'
ಡಯೆಟ್ ಕಾಸರಗೋಡು ಇದರ ಅಧೀನದಲ್ಲಿ ನಡೆಯುತ್ತಿರುವ 'ಸಾಕ್ಷರ 2014-15' ಯೋಜನೆಯ ಕೊನೆಯ ಹಂತವಾಗಿ 'ಸಾಕ್ಷರ ಘೋಷಣೆ' ಕಾರ್ಯಕ್ರಮವು ನಮ್ಮ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸಾಕ್ಷರ ಕಾರ್ಯಕ್ರಮದಲ್ಲಿ ಒಳಪಟ್ಟ ಮಕ್ಕಳು ತಮ್ಮ ಅನುಭವವನ್ನು ಹಂಚಿಕೊಂಡರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಸಾಕ್ಷರ ಕಾರ್ಯಕ್ರಮ ಯಶಸ್ವಿಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್ ಸಾಕ್ಷರ ಘೋಷಣೆಯನ್ನು ಮಾಡಿದರು.
Tuesday, 16 December 2014
Friday, 12 December 2014
Subscribe to:
Posts (Atom)