....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Friday, 25 December 2015

ಕ್ರಿಸ್ ಮಸ್ ಹಬ್ಬದ ಶುಭಾಶಯಗಳು

ಎಲ್ಲರಿಗೂ ಕ್ರಿಸ್ ಮಸ್ ಹಬ್ಬದ ಹಾರ್ಧಿಕ ಶುಭಾಶಯಗಳು



Friday, 18 December 2015

ಕ್ರಿಸ್ ಮಸ್ ಆಚರಣೆ

          ನಮ್ಮ ಶಾಲೆಯಲ್ಲಿ ಕ್ರಿಸ್'ಮಸ್ ಆಚರಣೆಯನ್ನು ಮಕ್ಕಳ ಬಾಲಸಭೆಯೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಯಿತು. ಮಕ್ಕಳಿಗೆ ವಿವಿಧ ಮನೋರಂಜನಾ ಸ್ಪರ್ಧೆಗಳನ್ನು ಆಯೋಜಿಸಲಾಯಿತು.















Friday, 4 December 2015

ನೆನಪಿನ ಕಾಣಿಕೆ

             ಜಿಲ್ಲಾ ಮಟ್ಟದ ಶಾಸ್ತ್ರಮೇಳದಲ್ಲಿ ಮಣ್ಣಿನ ಮಾದರಿ ರಚನೆಯಲ್ಲಿ 'ಎ' ಗ್ರೇಡ್'ನೊಂದಿಗೆ ದ್ವಿತೀಯ ಸ್ಥಾನ ಗಳಿಸಿದ ಕೀರ್ತನ್'ಗೆ ಶಾಲಾ ಪಿ.ಟಿ.ಎ ವತಿಯಿಂದ ಪ್ರೋತ್ಸಾಹಕ ಬಹುಮಾನವನ್ನು ನೀಡಲಾಯಿತು. ಸಭೆಯಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ. ಎ, ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ, ಉಪಾಧ್ಯಕ್ಷೆ ಶ್ರೀಮತಿ ತಿರುಮಲೇಶ್ವರಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.


 

Friday, 20 November 2015

ಜಿಲ್ಲಾ ಮಟ್ಟದ ಶಾಸ್ತ್ರ ಮೇಳ 2015-16

              ತ್ರಿಕರಿಪುರದ ಸರಕಾರಿ ವೃತ್ತಿಪರ ಪ್ರೌಢಶಾಲೆಯಲ್ಲಿ ಜರಗಿದ ಕಾಸರಗೋಡು ಜಿಲ್ಲಾ ಮಟ್ಟದ ಶಾಸ್ತ್ರೋತ್ಸವ 2015 ಕಾರ್ಯಕ್ರಮದಲ್ಲಿ ವೃತ್ತಿ ಪರಿಚಯ ಮೇಳದ ಮಣ್ಣಿನ ಮಾದರಿ ರಚನೆಯಲ್ಲಿ ನಮ್ಮ ಶಾಲೆಯ ಕೀರ್ತನ್ 'ಎ' ಗ್ರೇಡ್ ನೊಂದಿಗೆ ದ್ವಿತೀಯ ಸ್ಥಾನವನ್ನು ಗಳಿಸಿದ್ದಾನೆ. ಅವನಿಗೆ ಶಾಲಾ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯಿನಿ ಹಾಗೂ ಶಿಕ್ಷಕ ವೃಂದ ಹಾಗೂ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಂದ ಅಭಿನಂದನೆಗಳನ್ನು ಸಲ್ಲಿಸುತಿದ್ದೇವೆ.

Friday, 13 November 2015

ಮಕ್ಕಳ ದಿನಾಚರಣೆ

              ಭಾರತದ ಮೊದಲ ಪ್ರಧಾನಮಂತ್ರಿಯಾಗಿದ್ದ ಪಂಡಿತ್ ಜವಹರಲಾಲ್ ನೆಹರುರವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆಯನ್ನಾಗಿ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶಾಲಾ ಮಕ್ಕಳಿಗೆ ವಿವಿಧ ಮನೋರಂಜನಾ ಆಟಗಳನ್ನು ಏರ್ಪಡಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.







Wednesday, 11 November 2015

ದೀಪಾವಳಿ ಆಚರಣೆ

           ದೀಪಗಳ ಹಬ್ಬ ದೀಪಾವಳಿಯನ್ನು ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಮಕ್ಕಳಿಗೆ ಸಿಹಿ ಅವಲಕ್ಕಿಯನ್ನು ನೀಡಲಾಯಿತು. ದೀಪಾವಳಿ ಆಚರಣೆಯ ಕುರಿತು ಅಧ್ಯಾಪಕ ಜಯಪ್ರಶಾಂತ್. ಪಿ ರವರು ಕಿರು ವಿವರಣೆಯನ್ನು ನೀಡಿ ಅದರ ಐತಿಹ್ಯವನ್ನು ವಿವರಿಸಿದರು. ಮಕ್ಕಳೆಲ್ಲರೂ ನಕ್ಷತ್ರ ಕಡ್ಡಿಗಳನ್ನು ಹಚ್ಚಿ ಸಂಭ್ರಮಿಸಿದರು.







Tuesday, 3 November 2015

ಶಾಲಾಮಟ್ಟದ ಕ್ರೀಡಾಕೂಟ

            ಮಂಜೇಶ್ವರ ಉಪಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಮಕ್ಕಳನ್ನು ಆಯ್ಕೆ ಮಾಡಲು ಶಾಲೆಯಲ್ಲಿ ಮಕ್ಕಳ ಕ್ರೀಡಾಕೂಟವನ್ನು ನಡೆಸಲಾಯಿತು. ಮಕ್ಕಳೆಲ್ಲರೂ ಬಹಳ ಉತ್ಸಾಹದಿಂದ ಭಾಗವಹಿಸಿದರು. ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥರವರು ಜೊತೆಗಿದ್ದು ಸಹಕರಿಸಿದರು. ಎಲ್ಲರಿಗೂ ಪಾನೀಯ ಹಾಗೂ ಬಿಸ್ಕತ್ ನ್ನು ನೀಡಲಾಯಿತು.









Friday, 30 October 2015

ತಿಂಗಳ ಬಾಲಸಭೆ

             ಒಕ್ಟೋಬರ್ ತಿಂಗಳ ಬಾಲಸಭೆಯನ್ನು ತಾ.30-10-2105 ರಂದು ನಡೆಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು. ಕಾರ್ಯಕ್ರಮವನ್ನು ವಿದ್ಯಾರ್ಥಿ ಅಬ್ದುಲ್ ಕಾದರ್ ನಾದೀಮ್ ನಿರೂಪಿಸಿದನು.