....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Friday, 30 October 2015

ತಿಂಗಳ ಬಾಲಸಭೆ

             ಒಕ್ಟೋಬರ್ ತಿಂಗಳ ಬಾಲಸಭೆಯನ್ನು ತಾ.30-10-2105 ರಂದು ನಡೆಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ಜರಗಿದವು. ಕಾರ್ಯಕ್ರಮವನ್ನು ವಿದ್ಯಾರ್ಥಿ ಅಬ್ದುಲ್ ಕಾದರ್ ನಾದೀಮ್ ನಿರೂಪಿಸಿದನು.

















Wednesday, 21 October 2015

ಶಾರದಾ ಪೂಜೆ

            ನವರಾತ್ರಿಯ ಶುಭಸಂದರ್ಭದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ನಮ್ಮ ಶಾಲೆಯಲ್ಲಿ ವಿದ್ಯಾಮಾತೆ ಶಾರದಾ ದೇವೀ ಪೂಜೆ ನಡೆಯಿತು. ಊರ ವಿದ್ಯಾಭಿಮಾನಿಗಳು, ಶಾಲಾ ಆಡಳಿತ ಸಮಿತಿ ಸದಸ್ಯರು, ಮಕ್ಕಳ ಹೆತ್ತವರ ಉಪಸ್ಥಿತಿಯಲ್ಲಿ ಶಾರದಾ ಪೂಜೆ ನಡೆಯಿತು. ಭಜನಾ ಕಾರ್ಯಕ್ರಮದೊಂದಿಗೆ ನಡೆದ ಪೂಜೆಯು ಮಧ್ಯಾಹ್ನ ಮಹಾಮಂಗಲಾರತಿಯೊಂದಿಗೆ ಸಮಾಪ್ತಿಯಾಯಿತು. ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.





ಅಭಿನಂದನೆಗಳು

                   ಮಂಜೇಶ್ವರ ಉಪಜಿಲ್ಲಾ ವಿಜ್ಞಾನ, ಸಮಾಜ ವಿಜ್ಞಾನ, ಗಣಿತ ಹಾಗೂ ವೃತ್ತಿ ಪರಿಚಯ ಮೇಳದಲ್ಲಿ ಭಾಗವಹಿಸಿದ ನಮ್ಮ ಶಾಲೆಯ ಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳು. ಮಣ್ಣಿನ ಮಾದರಿ ರಚನೆ (Clay model) ಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕೀರ್ತನ್, ಸಮಾಜ ವಿಜ್ಞಾನ ಮೋಡೆಲ್'ನಲ್ಲಿ 'ಎ' ಗ್ರೇಡ್ ಗಳಿಸಿದ ಮಾನಸ ಹಾಗೂ ಆಯಿಶತ್ ತಸ್ರೀಫ, ವಿಜ್ಞಾನ ವಿಭಾಗದ ಸಂಗ್ರಹ (Collections) ದಲ್ಲಿ 'ಬಿ' ಗ್ರೇಡ್ ಗಳಿಸಿದ ಭವಿಷ್ ಹಾಗೂ ಆಯಿಷ ಅಸ್ನಳಿಗೆ ಪ್ರತ್ಯೇಕ ಅಭಿನಂದನೆಗಳು....





Tuesday, 20 October 2015

ಉಪಜಿಲ್ಲಾ ಶಾಸ್ತ್ರಮೇಳ

            ಸರಕಾರಿ ವೃತ್ತಿಪರ ಪ್ರೌಢಶಾಲೆ ಕುಂತ್ತೂರಿನಲ್ಲಿ ನಡೆದ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರಮೇಳದಲ್ಲಿ ನಮ್ಮ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಭಾಗವಹಿಸಿದ ಎಲ್ಲಾ ಸ್ಪರ್ಧಾಳುಗಳಿಗೂ ಅಭಿನಂದನೆಗಳು.....





Thursday, 15 October 2015

ಸೈಬರ್ ಸುರಕ್ಷಾ ದಿನ

ಇಂದು ಸೈಬರ್ ಸುರಕ್ಷಾ ದಿನ. ಆಧುನಿಕತೆಯ ಭರಾಟೆಯಲ್ಲಿ ಹುದುಗಿ ಹೋಗಿರುವ ನಮ್ಮ ಜೀವನದಲ್ಲಿ ಇಂಟರ್ನೆಟ್ ಒಂದು ಪ್ರಮುಖ ಅಂಗವಾಗಿಯೇ ಹೋಗಿದೆ. ಎಲ್ಲವನ್ನೂ ಇಂಟರ್ನೆಟ್'ನಲ್ಲಿ ಪಡೆಯೋ ಸೌಲಭ್ಯ ಇರುವಾಗ ಅದನ್ನು ನಮ್ಮ ಒಳಿತಿಗಾಗಿ ಬಳಸೋದು ಅತೀ ಮುಖ್ಯವಾಗುತ್ತದೆ. ದೇಶದ ಸುರಕ್ಷತೆ, ಸಾಮಾಜಿಕ ಒಳಿತು ಹಾಗೂ ವೈಯಕ್ತಿಕ ಜ್ಞಾನ ವೃದ್ಧಿಗೆ ಅನುಯೋಜ್ಯವಾಗಿ ಇಂಟರ್ನೆಟ್'ನ್ನು ಬಳಸೋಣ. ಆ ನಿಟ್ಟಿನಲ್ಲಿ ಈ ಕೆಳಗಿನ ಪ್ರತಿಜ್ಞೆಯನ್ನು ಮಾಡೋಣ.

ಪ್ರತಿಜ್ಞೆ
ನಾನು ಭಾರತೀಯ ಸೈಬರ್ ಸುರಕ್ಷಾ ನಿಯಮಗಳಿಗೆ ವಿಧೇಯನಾಗಿ ಮಾತ್ರವೇ ಇಂಟರ್ನೆಟ್ ಅನುಬಂಧಿತ ವಸ್ತುಗಳನ್ನು ಉಪಯೋಗಿಸುತ್ತೇನೆ. ಸಾಮಾಜಿಕ ಒಳಿತಿಗಾಗಿ ಅನುಯೋಜ್ಯ ರೀತಿಯಲ್ಲಿ ಜ್ಞಾನವನ್ನು ವಿನಿಮಯ ಮಾಡಲೂ ಹೆಚ್ಚಿಸಿಕೊಳ್ಳಲೂ ಇಂಟರ್ನೆಟ್ ತಂತ್ರಜ್ಞಾನ ವಿದ್ಯೆಯನ್ನು ಪ್ರಯೋಜನ ಪಡಿಸಿಕೊಳ್ಳುತ್ತೇನೆ. ಮಾತಾಪಿತರ ಅರಿವಿನೊಂದಿಗೆ ಅನುಮತಿ ಪಡೆದು ಮಾತ್ರವೇ ಇಂಟರ್ನೆಟ್ ಉಪಯೋಗಿಸುತ್ತೇನೆ. ದೇಶದ ಹಿತಾಸಕ್ತಿಗೆದುರಾಗಿ ಜಾತಿ,ಮತ,ವರ್ಗ ಭೇದ ಬೆಳೆಸುವ ಸಂದೇಶಗಳನ್ನು ರವಾನಿಸುವುದಿಲ್ಲ . ಅನುಮತಿಯಿಲ್ಲದ ವಿವರಗಳನ್ನು ಡೌನ್ ಲೋಡ್ ಮಾಡುವುದೋ ತಪ್ಪಾದ,ಇತರರಿಗೆ ಅಪಕೀರ್ತಿ ಉಂಟುಮಾಡುವ, ನೋವು ತರಿಸುವ ಸಂದೇಶಗಳನ್ನು ಇಂಟರ್ನೆಟ್ ಮೂಲಕ ರವಾನಿಸುವುದಿಲ್ಲ. ಇಂಟರ್ನೆಟ್ ಉಪಯೋಗಿಸುವಾಗ ಅನುಸರಿಸಬೇಕಾದ ನಿಯಮಗಳನ್ನೂ ಗೌರವವನ್ನೂ ಪರಿಪಾಲಿಸುವ ಉತ್ತಮ ಪೌರನಾಗಿ ನಾನು ವರ್ತಿಸುತ್ತೇನೆಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇನೆ.

Friday, 2 October 2015

ಸೇವನಾ ವಾರ ಕಾರ್ಯಕ್ರಮಕ್ಕೆ ಚಾಲನೆ

              ಗಾಂಧೀ ಜಯಂತಿ ಪ್ರಯುಕ್ತ ಒಂದು ವಾರದ ಕಾಲ ನಡೆಯುವ ಸೇವನಾ ವಾರ ಕಾರ್ಯಕ್ರಮಕ್ಕೆ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಚಾಲನೆ ನೀಡಿದರು. ಮೊದಲ ದಿನವಾದ ಇಂದು ಶಾಲಾ ಪರಿಸರ ಶುಚೀಕರಣ ನಡೆಸಲಾಯಿತು. ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಶಿಕ್ಷಕ-ಶಿಕ್ಷಕಿಯರೊಂದಿಗೆ ಸೇರಿ ಶುಚೀಕರಣ ನಡೆಸಿದರು. ಎಲ್ಲರಿಗೂ ಪಾನೀಯದ ವ್ಯವಸ್ಥೆ ಮಾಡಲಾಗಿತ್ತು.





Thursday, 1 October 2015

ಲಾಲ್ ಬಹದ್ದೂರ್ ಶಾಸ್ತ್ರಿಯವರ ಜನ್ಮದಿನದ ಶುಭಾಶಯ

        ಭಾರತ ಕಂಡ ಶ್ರೇಷ್ಟ ಪ್ರಧಾನಮಂತ್ರಿಗಳಲ್ಲಿ ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿಯವರು ಒಬ್ಬರಾಗಿದ್ದಾರೆ. ಅವರ 111 ನೇ ಜನ್ಮದಿನವಾದ ಇಂದು ಭಾರತದಾದ್ಯಂತ ಆಚರಿಸಲಾಗುತ್ತಿದೆ. 'ಜೈ ಜವಾನ್ ಜೈ ಕಿಸಾನ್' ಘೋಷಣೆಯನ್ನು ಮೊಳಗಿಸಿದ ಅಪ್ಪಟ ದೇಶಪ್ರೇಮಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು...

ಗಾಂಧೀ ಜಯಂತಿಯ ಶುಭಾಶಯ

ಭಾರತದ ರಾಷ್ಟ್ರಪಿತ ಮೋಹನದಾಸ ಕರಮಚಂದ ಗಾಂಧಿಯವರ 146 ನೇ ಜನ್ಮದಿನದ ಹಾರ್ದಿಕ ಶುಭಾಶಯಗಳು