....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Thursday, 31 March 2016

2015-16 ನೇ ಸಾಲಿನ ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ

         2015-16 ನೇ ಸಾಲಿನ ಶೈಕ್ಷಣಿಕ ವರ್ಷದ ನಾಲ್ಕನೇ ತರಗತಿ ಮಕ್ಕಳ ಬೀಳ್ಕೊಡುಗೆ ಸಮಾರಂಭ ತಾ. 31-03-2016 ನೇ ಗುರುವಾರದಂದು ನಡೆಸಲಾಯಿತು. ಈ ಸಮಾರಂಭದಲ್ಲಿ ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್ ಪಿ ಉದ್ಯಾವರ್, ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ, ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ, ಶ್ರೀಮತಿ ಶಾಲಿನಿ ಕೆ ಬೆಂಗರೆ ಉಪಸ್ಥಿತರಿದ್ದು ಶುಭ ಹಾರೈಸಿದರು. ಶಾಲಾ ಅಧ್ಯಾಪಕರಾದ ಅಬ್ದುಲ್ ಮಜೀದ್, ಜಯಪ್ರಶಾಂತ್ ಪಿ, ಭವ್ಯಶ್ರೀ ಯನ್ ಹಾಗೂ ಗೀತಾ ಎ ವಿದ್ಯಾರ್ಥಿಗಳಿಗೆ ಶುಭ ಕೋರಿದರು. ಇದೇ ಸಂದರ್ಭದಲ್ಲಿ ಶ್ರೀ ಕೃಷ್ಣಪ್ಪ ಬೆಂಗರೆಯವರು ವರ್ಷಂಪ್ರತಿ ನೀಡುವಂತೆ ಈ ವರ್ಷವೂ ನಾಲ್ಕನೇ ತರಗತಿಯ ಎಲ್ಲಾ ಮಕ್ಕಳಿಗೆ ಕಥೆ ಪುಸ್ತಕ ಹಾಗೂ ಸಿಹಿ ತಿಂಡಿಯನ್ನು ನೀಡಿದರು. ಮಕ್ಕಳು ತಮ್ಮ ಶಾಲಾ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಂಡು ತಮ್ಮ ಶಾಲಾಭಿಮಾನವನ್ನು ಎತ್ತಿ ಹಿಡಿದರು. ಬೀಳ್ಕೊಡುಗೆಯ ಸಂದರ್ಭದಲ್ಲಿ ಮಕ್ಕಳ ಕಣ್ಣಂಚಲ್ಲಿ ಸುರಿದ ಕಣ್ಣೀರು ಎಲ್ಲರನ್ನು ಮೂಕರನ್ನಾಗಿಸಿತು.
" ನಿಮ್ಮ ಮುಂದಿನ ಶೈಕ್ಷಣಿಕ ಜೀವನವೂ ಯಶಸ್ವಿಯಾಗಿ ಸಾಗಿ ಕೀರ್ತಿ ತರುವಂತಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತಿದ್ದೇವೆ"
"ಶುಭವಾಗಲಿ"















Monday, 28 March 2016

2015-16 ನೇ ಸಾಲಿನ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು

2015-16 ನೇ ಸಾಲಿನ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಾಗೂ ಶಾಲಾ ಶಿಕ್ಷಕ ವೃಂದ..

1 ನೇ ತರಗತಿ

 2 ನೇ ತರಗತಿ

 3 ನೇ ತರಗತಿ

 4 ನೇ ತರಗತಿ

 ಶಾಲಾ ಅಧ್ಯಾಪಕ ವೃಂದ