Wednesday, 29 October 2014
ಸಡಗರದ ದೀಪಾವಳಿ ಆಚರಣೆ
ಬೆಳಕಿನ ಹಬ್ಬ ದೀಪಾವಳಿಯನ್ನು ನಮ್ಮ ಶಾಲೆಯಲ್ಲಿ ಬಹಳ ಸಂಭ್ರಮದಿಂದ ಆಚರಿಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ದೀಪಾವಳಿ ಆಚರಣೆಯ ಪೌರಾಣಿಕ ಹಿನ್ನಲೆಯನ್ನು ಮಕ್ಕಳಿಗೆ ತಿಳಿಸಿದರು. ದೀಪಾವಳಿ ಕುರಿತಾದ ಹಾಡನ್ನು ಮಕ್ಕಳು ಹಾಡಿದರು. ಮಕ್ಕಳನ್ನು ಕತ್ತಲ ಕೋಣೆಯಲ್ಲಿ ಕುಳ್ಳಿರಿಸಿ, ಬಳಿಕ ಹಣತೆಗಳನ್ನು ಬೆಳಗಿಸುವ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಎಂಬ ಸಂದೇಶವನ್ನು ಸಾರಲಾಯಿತು.
Tuesday, 21 October 2014
ಶಾಸ್ತ್ರ ಮೇಳದಲ್ಲಿ ಮಿಂಚಿದ ಪ್ರತಿಭೆಗಳು
Thursday, 9 October 2014
ವಿಶ್ವ ಅಂಚೆ ದಿನಾಚರಣೆ
ತಾ. 09-10-2014 ನೇ ಗುರುವಾರದಂದು ನಮ್ಮ ಶಾಲೆಯಲ್ಲಿ ವಿಶ್ವ ಅಂಚೆ ದಿನಾಚರಣೆಯನ್ನು ಆಚರಿಸಲಾಯಿತು. ಆ ಪ್ರಯುಕ್ತ ಅಂಚೆ ಚೀಟಿಗಳ ಪ್ರದರ್ಶನ ನಡೆಸಲಾಯಿತು. ಬಳಿಕ ಅಂಚೆಯಣ್ಣನ ಕೆಲಸವನ್ನು ಮಕ್ಕಳು ಅಣುಕು ಪ್ರದರ್ಶನದ ಮೂಲಕ ತೋರಿಸಿದರು. ಅದಕ್ಕಾಗಿ ಮಕ್ಕಳಲ್ಲಿ ತಮ್ಮ ಗೆಳೆಯರಿಗೆ ಪತ್ರವನ್ನು ಬರೆಯುವ ಚಟುವಟಿಕೆಯನ್ನು ಮಾಡಲಾಯಿತು. ಅಂಚೆಯಣ್ಣನ ಪಾತ್ರವನ್ನು ನಿರ್ವಹಿಸಿದ ಶಾಲಾ ವಿದ್ಯಾರ್ಥಿ ದೀರಜ್ ಆರ್ ಅಂಚೆಪೆಟ್ಟಿಗೆಯಲ್ಲಿ ಮಕ್ಕಳು ಹಾಕಿದ ಪತ್ರಗಳನ್ನು ವಿತರಿಸುವ ಮೂಲಕ ಎಲ್ಲರ ಗಮನ ಸೆಳೆದನು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಅಂಚೆ ವ್ಯವಸ್ಥೆಗಳ ಕುರಿತು ಮಕ್ಕಳಿಗೆ ಮಾಹಿತಿಯನ್ನು ನೀಡಿದರು.
Thursday, 2 October 2014
'ಸ್ವಚ್ಛ ಭಾರತ ನಿರ್ಮಾಣ'ದಲ್ಲಿ ಭಾಗಿಯಾದಾಗ....
ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಜಯಂತಿ ಪ್ರಯುಕ್ತ ನಮ್ಮ ಶಾಲೆಯಲ್ಲಿ ತಾ. 02-10-2014 ನೇ ಗುರುವಾರದಂದು ವಿಶೇಷ ಶಾಲಾ ಎಸೆಂಬ್ಲಿಯನ್ನು ನಡೆಸಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಹಾಗೂ ಶಾಲಾ ಅಧ್ಯಾಪಕ-ಅಧ್ಯಾಪಕಿಯರು ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ನಮನವನ್ನು ಸಲ್ಲಿಸಿದರು. ಬಳಿಕ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಅಧ್ಯಾಪಕ-ಅಧ್ಯಾಪಕಿಯರ ಜೊತೆಗೂಡಿ ಶಾಲಾ ಪರಿಸರ ಹಾಗೂ ಸ್ಥಳೀಯ ಅಂಗನವಾಡಿಯ ಪರಿಸರವನ್ನು ಶುಚೀಕರಣ ಮಾಡಿದರು. ಮಕ್ಕಳೆಲ್ಲರೂ ಬಹಳ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳ ದಣಿವನ್ನು ನಿವಾರಿಸಲು ಅವಲಕ್ಕಿ ಮತ್ತು ಮಜ್ಜಿಗೆಯನ್ನು ನೀಡಲಾಯಿತು.
ದಸರಾ ನಾಡಹಬ್ಬ ಆಚರಣೆ....
ನಮ್ಮ ಶಾಲೆಯಲ್ಲಿ ದಸರಾ ನಾಡಹಬ್ಬವನ್ನು ತಾ. 01-10-2014 ನೇ ಬುಧವಾರದಂದು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಕರ್ನಾಟಕದ ನಾಡಗೀತೆಯಾದ 'ಜೈ ಭಾರತ ಜನನಿಯ ತನುಜಾತೆ' ಗೀತೆಯನ್ನು ಹಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಳಿಕ ಮಕ್ಕಳು ವಿವಿಧ ಜನಪದ ಹಾಡುಗಳನ್ನು ಹಾಡಿ, ನೀತಿಕಥೆಯನ್ನು ಹೇಳಿ, ನೃತ್ಯಗಳನ್ನು ಮಾಡುವುದರ ಮೂಲಕ ಎಲ್ಲರ ಮನರಂಜಿಸಿದರು. ನಂತರ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.
Subscribe to:
Posts (Atom)