....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Monday, 26 January 2015

66ನೇ ಗಣರಾಜ್ಯೋತ್ಸವ ಆಚರಣೆ


          ನಮ್ಮ ಶಾಲೆಯಲ್ಲಿ 66ನೇ ಗಣರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ನಡೆದ ದ್ವಜಾರೋಹಣವನ್ನು ವಾರ್ಡ್ ಸದಸ್ಯ ಶ್ರೀ ಪವನ್ ಕುಮಾರ್ ಅಂಜರೆ ನೆರವೇರಿಸಿದರು. ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್, ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಬೆಂಗರೆ, ಕೋಶಾಧಿಕಾರಿ ವಿಶ್ವನಾಥ್ ಸಿ ಉದ್ಯಾವರ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ, ಶ್ರೀಮತಿ ಶಾಲಿನಿ ಕೆ ಬೆಂಗರೆ ಉಪಸ್ಥಿತರಿದ್ದರು. ಬಳಿಕ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.

66ನೇ ಗಣರಾಜ್ಯೋತ್ಸವದ ಶುಭಾಶಯಗಳು

ಎಲ್ಲರಿಗೂ 66ನೇ ಗಣರಾಜ್ಯೋತ್ಸವದ ಶುಭಾಶಯಗಳು
 
 

Sunday, 25 January 2015

ಶಾಲಾ ಶೈಕ್ಷಣಿಕ ಪ್ರವಾಸ 2014-15

               2014-15 ನೇ ಸಾಲಿನ ಒಂದು ದಿನದ ಶಾಲಾ ಶೈಕ್ಷಣಿಕ ಪ್ರವಾಸವನ್ನು ತಾ. 23-01-2015 ನೇ ಶುಕ್ರವಾರದಂದು ನಡೆಸಲಾಯಿತು. ಶ್ರೀ ಅನಂತಪದ್ಮನಾಭ ಕ್ಷೇತ್ರ ಅನಂತಪುರ, ಕಿನ್'ಫ್ರ- ಸಣ್ಣ ಕೈಗಾರಿಕೆಗಳ ಕೇಂದ್ರ ಸೀತಾಂಗೋಳಿ,  ಸರಕಾರಿ ಕುರುಡರ ಶಾಲೆ ಕಾಸರಗೋಡು, ಬೇಕಲ ಪಾರ್ಕ್ ಮತ್ತು ಬೀಚ್, ಹಾಗೂ ಬೇಕಲ ಕೋಟೆ ಮೊದಲಾದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಲಾಯಿತು.


Wednesday, 14 January 2015

ಯೋಗ ತರಭೇತಿ

         ನಮ್ಮ ಶಾಲೆಯಲ್ಲಿ ಶ್ರೀಮತಿ ಗಿರಿಜಾ ಎನ್ ಉದ್ಯಾವರ್'ರವರಿಂದ ಶಾಲಾ ಮಕ್ಕಳಿಗೆ 5 ದಿವಸಗಳ ಯೋಗ ತರಭೇತಿ ಶಿಬಿರವು ನಡೆಯಿತು. ಮಕ್ಕಳ ಮಟ್ಟಕ್ಕನುಗುಣವಾದ ಸರಳ ವ್ಯಾಯಾಮ, ಆಸನ ಹಾಗೂ ಪ್ರಾಣಾಯಾಮಗಳ ಕುರಿತು ತರಭೇತಿ ನಡೆಯಿತು. ಯೋಗ ತರಭೇತಿ ಶಿಬಿರದ ಕೊನೆಯ ದಿವಸ ಶಾಲಾ ಮಕ್ಕಳು ಅವರನ್ನು ಸನ್ಮಾನಿಸಿದರು.


















ಕಲೋತ್ಸವದ ಪ್ರತಿಭೆಗಳು

2014-15 ನೇ ಸಾಲಿನ ಮಂಜೇಶ್ವರ ಉಪಜಿಲ್ಲಾ ಕಲೋತ್ಸವದಲ್ಲಿ ಮಿಂಚಿದ ಪ್ರತಿಭೆಗಳು...


Sunday, 11 January 2015

ಸ್ವಾಮೀ ವಿವೇಕಾನಂದರ 152 ನೇ ಜನ್ಮದಿನಾಚರಣೆಯ ಶುಭಾಶಯಗಳು

ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ.
ಆದ್ದರಿಂದ ಏನನ್ನು ಯೋಚಿಸುತ್ತೀರೋ ಅದರ ಬಗ್ಗೆ
ಎಚ್ಚರದಿಂದಿರಿ
- ಸ್ವಾಮೀ ವಿವೇಕಾನಂದ