ಸರ್ವ
ಶಿಕ್ಷಾ ಅಭಿಯಾನ್ ಕೇರಳ ಇದರ
ಅಧೀನದಲ್ಲಿ ಮೂರು ಹಾಗೂ ನಾಲ್ಕನೇ
ತರಗತಿ ಮಕ್ಕಳಿಗೆ ಗಣಿತಾಶಯಗಳ
ಸಮಸ್ಯೆಗಳನ್ನು ಸುಲಭಗೊಳಿಸಲು
ಆಯೋಜಿಸಿದ 'ಮೆಟ್ರಿಕ್
ಮೇಳ 2014-15' ಎಂಬ ವಿನೂತನ
ಕಾರ್ಯಕ್ರಮದ ಉದ್ಘಾಟನಾ
ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ
ನಡೆಸಲಾಯಿತು. ಉದ್ಘಾಟನೆಯನ್ನು
ಶಾಲಾ ಪಿ.ಟಿ.ಎ
ಅಧ್ಯಕ್ಷ ಶ್ರೀ ಚಂದ್ರಶೇಖರ್
'ಮೆಟ್ರಿಕ್
ಗಡಿಯಾರ'ವನ್ನು
ಬಿಡುಗಡೆಗೊಳಿಸುವುದರ ಮೂಲಕ
ನೆರವೇರಿಸಿದರು. ಅಧ್ಯಕ್ಷತೆಯನ್ನು
ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್
ಪಿ ಉದ್ಯಾವರ್'ರವರು
ವಹಿಸಿದ್ದರು. ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಜಲಜಾಕ್ಷಿ ಎ ಯವರು ಸ್ವಾಗತಿಸಿ,
ಶಾಲಾ ಅಧ್ಯಾಪಿಕೆಯಾದ
ಶ್ರೀಮತಿ ಗೀತಾ ಎ ವಂದಿಸಿದರು.
ಅಧ್ಯಾಪಕ ಶ್ರೀ
ಜಯಪ್ರಶಾಂತ್ ಪಿ ಯವರು ಕಾರ್ಯಕ್ರಮ
ನಡೆಸಿಕೊಟ್ಟರು.
Friday, 28 November 2014
Friday, 14 November 2014
'ಕ್ಲೀನ್ ಸ್ಕೂಲ್-ಸ್ಮಾರ್ಟ್ ಸ್ಕೂಲ್'- ರಕ್ಷಕರ ಸಮ್ಮೇಳನ
ತಾ. 14-11-2014 ನೇ ಶುಕ್ರವಾರದಂದು ಮಧ್ಯಾಹ್ನ 2:00 ಗಂಟೆಗೆ ಸರ್ವ ಶಿಕ್ಷಾ ಅಭಿಯಾನ್-ಕೇರಳ ಇದರ ಅಧೀನದಲ್ಲಿ 'ಹಕ್ಕು ಆಧಾರಿತ ಶಾಲೆ', 'ಶಿಶು ಸೌಹಾರ್ದಯುತ ಶಾಲೆ' ಎಂಬ ಘೋಷಣೆಯೊಂದಿಗೆ 'ಕ್ಲೀನ್ ಸ್ಕೂಲ್-ಸ್ಮಾರ್ಟ್ ಸ್ಕೂಲ್' ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳ 'ರಕ್ಷಕರ ಸಮ್ಮೇಳನ'ವು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ, ಉದ್ಯಾವರ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಬೆಂಗರೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್, ಉಪಾಧ್ಯಕ್ಷೆ ಕಮರುನ್ನೀಸ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಸ್ವಾಗತಿಸಿ, ಶಾಲಾ ಅಧ್ಯಾಪಿಕೆಯಾದ ಶ್ರೀಮತಿ ಗೀತಾ ಎ ವಂದಿಸಿದರು.
ಬಳಿಕ ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು ರಕ್ಷಕರಿಗೆ 'ಕ್ಲೀನ್ ಸ್ಕೂಲ್-ಸ್ಮಾರ್ಟ್ ಸ್ಕೂಲ್' ಕುರಿತು ತರಗತಿಯನ್ನು ಶಾಲಾ ಮಕ್ಕಳ ಹೆತ್ತವರಿಗೆ ನಡೆಸಿಕೊಟ್ಟರು.
'ಸಾಕ್ಷರ 2014-15' ಮಕ್ಕಳ ಸಾಹಿತ್ಯ ಸಭೆ
ತಾ. 14-11-2014 ನೇ ಶುಕ್ರವಾರದಂದು 'ಸಾಕ್ಷರ 2014-15' ಕಾರ್ಯಕ್ರಮದ ಭಾಗವಾಗಿ ಮಕ್ಕಳ ಸಾಹಿತ್ಯ ಸಭೆಯನ್ನು ನಡೆಸಲಾಯಿತು. ಕಾರ್ಯಕ್ರಮವನ್ನು ವಿದ್ಯಾರ್ಥಿ ರಿತೇಶ್ ಎಸ್ ಆಚಾರ್ಯ ಉದ್ಘಾಟಿಸಿದನು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಶುಭ ಕೋರಿದರು. ಬಳಿಕ 'ಸಾಕ್ಷರ 2014-15' ಕಾರ್ಯಕ್ರಮಕ್ಕೆ ಒಳಪಟ್ಟ ಮಕ್ಕಳಿಂದ ವಿವಿಧ ಕಾರ್ಯಕ್ರಮಗಳು ನಡೆದವು. ಇದೇ ಸಂದರ್ಭದಲ್ಲಿ ಶಾಲಾ ಹಳೆ ವಿದ್ಯಾರ್ಥಿ ಧೀರಜ್ ಹೊನ್ನೆಯವರು ಶಾಲಾ ಮಕ್ಕಳಿಗೆ ನೀಡಿದ ಕಲಿಕೋಪಕರಣವಾದ ಪೆನ್ನು-ಪೆನ್ಸಿಲ್'ಗಳನ್ನು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಮಕ್ಕಳಿಗೆ ವಿತರಿಸಿದರು.
Subscribe to:
Posts (Atom)