....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Friday, 14 November 2014

'ಕ್ಲೀನ್ ಸ್ಕೂಲ್-ಸ್ಮಾರ್ಟ್ ಸ್ಕೂಲ್'- ರಕ್ಷಕರ ಸಮ್ಮೇಳನ

             ತಾ. 14-11-2014 ನೇ ಶುಕ್ರವಾರದಂದು ಮಧ್ಯಾಹ್ನ 2:00 ಗಂಟೆಗೆ ಸರ್ವ ಶಿಕ್ಷಾ ಅಭಿಯಾನ್-ಕೇರಳ ಇದರ ಅಧೀನದಲ್ಲಿ 'ಹಕ್ಕು ಆಧಾರಿತ ಶಾಲೆ', 'ಶಿಶು ಸೌಹಾರ್ದಯುತ ಶಾಲೆ' ಎಂಬ ಘೋಷಣೆಯೊಂದಿಗೆ 'ಕ್ಲೀನ್ ಸ್ಕೂಲ್-ಸ್ಮಾರ್ಟ್ ಸ್ಕೂಲ್' ಕಾರ್ಯಕ್ರಮದ ಅಂಗವಾಗಿ ಶಾಲಾ ಮಕ್ಕಳ 'ರಕ್ಷಕರ ಸಮ್ಮೇಳನ'ವು  ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ, ಉದ್ಯಾವರ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಬೆಂಗರೆ ನೆರವೇರಿಸಿದರು.  ಕಾರ್ಯಕ್ರಮದಲ್ಲಿ ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್, ಉಪಾಧ್ಯಕ್ಷೆ ಕಮರುನ್ನೀಸ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ  ಶ್ರೀಮತಿ ಜಲಜಾಕ್ಷಿ ಎ ಸ್ವಾಗತಿಸಿ, ಶಾಲಾ ಅಧ್ಯಾಪಿಕೆಯಾದ  ಶ್ರೀಮತಿ ಗೀತಾ ಎ ವಂದಿಸಿದರು.
       ಬಳಿಕ ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು ರಕ್ಷಕರಿಗೆ 'ಕ್ಲೀನ್ ಸ್ಕೂಲ್-ಸ್ಮಾರ್ಟ್ ಸ್ಕೂಲ್' ಕುರಿತು ತರಗತಿಯನ್ನು ಶಾಲಾ ಮಕ್ಕಳ ಹೆತ್ತವರಿಗೆ ನಡೆಸಿಕೊಟ್ಟರು.
 
 






No comments:

Post a Comment