ಸರ್ವ
ಶಿಕ್ಷಾ ಅಭಿಯಾನ್ ಕೇರಳ ಇದರ
ಅಧೀನದಲ್ಲಿ ಮೂರು ಹಾಗೂ ನಾಲ್ಕನೇ
ತರಗತಿ ಮಕ್ಕಳಿಗೆ ಗಣಿತಾಶಯಗಳ
ಸಮಸ್ಯೆಗಳನ್ನು ಸುಲಭಗೊಳಿಸಲು
ಆಯೋಜಿಸಿದ 'ಮೆಟ್ರಿಕ್
ಮೇಳ 2014-15' ಎಂಬ ವಿನೂತನ
ಕಾರ್ಯಕ್ರಮದ ಉದ್ಘಾಟನಾ
ಕಾರ್ಯಕ್ರಮವನ್ನು ನಮ್ಮ ಶಾಲೆಯಲ್ಲಿ
ನಡೆಸಲಾಯಿತು. ಉದ್ಘಾಟನೆಯನ್ನು
ಶಾಲಾ ಪಿ.ಟಿ.ಎ
ಅಧ್ಯಕ್ಷ ಶ್ರೀ ಚಂದ್ರಶೇಖರ್
'ಮೆಟ್ರಿಕ್
ಗಡಿಯಾರ'ವನ್ನು
ಬಿಡುಗಡೆಗೊಳಿಸುವುದರ ಮೂಲಕ
ನೆರವೇರಿಸಿದರು. ಅಧ್ಯಕ್ಷತೆಯನ್ನು
ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್
ಪಿ ಉದ್ಯಾವರ್'ರವರು
ವಹಿಸಿದ್ದರು. ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಜಲಜಾಕ್ಷಿ ಎ ಯವರು ಸ್ವಾಗತಿಸಿ,
ಶಾಲಾ ಅಧ್ಯಾಪಿಕೆಯಾದ
ಶ್ರೀಮತಿ ಗೀತಾ ಎ ವಂದಿಸಿದರು.
ಅಧ್ಯಾಪಕ ಶ್ರೀ
ಜಯಪ್ರಶಾಂತ್ ಪಿ ಯವರು ಕಾರ್ಯಕ್ರಮ
ನಡೆಸಿಕೊಟ್ಟರು.



No comments:
Post a Comment