ದೈನಂದಿನ ಜೀವನದಲ್ಲಿ ನಡೆಯುವ ಅದೆಷ್ಟೋ ಗಣಿತಕ್ಕೆ ಸಂಬಂಧಿಸಿದ ಚಟುವಟಿಕೆಗಳ ಕುರಿತಾದ ತಿಳುವಳಿಕೆಯನ್ನು ಇನ್ನಷ್ಟು ಗಟ್ಟಿಗೊಳಿಸುವ ಸಲುವಾಗಿ 'ಮೆಟ್ರಿಕ್ ದಿನ'ದಲ್ಲಿ ಹಲವಾರು ಚಟುವಟಿಕೆಗಳನ್ನು ನೀಡುವ ಮೂಲಕ ಪುನ:ಸ್ಮರಿಸಲಾಯಿತು. ಇದರ ಕೊನೆಯ ಭಾಗವಾಗಿ ಒಂದು ದಿನದ 'ಮೆಟ್ರಿಕ್ ಶಿಬಿರ'ವನ್ನು ತಾ. 26-01-2016 ನೇ ಮಂಗಳವಾರದಂದು ನಡೆಸಲಾಯಿತು. ಇದರ ಉದ್ಘಾಟನೆಯನ್ನು ವಾರ್ಡ್ ಸದಸ್ಯೆ ಶ್ರೀಮತಿ ಶಶಿಕಲಾರವರು 'ಮೆಟ್ರಿಕ್ ಗಡಿಯಾರ'ವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ, ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಬಳಿಕ ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ತರಗತಿ ನಡೆಸಿಕೊಟ್ಪರು. ಮಕ್ಕಳನ್ನು ಪ್ರೇರೇಪಿಸುವ ಹಲವಾರು ಚಟುವಟಿಕೆಗಳನ್ನು ನೀಡುವುದರೊಂದಿಗೆ ಮಕ್ಕಳಿಗೆ ಮಜ್ಜಿಗೆ ಹಾಗೂ 'ಫ್ರುಟ್ಸ್ ಸಲಾಡ್' ನೀಡಿ ಹೊಟ್ಟೆ ತಣ್ಣಗೆಗೊಳಿಸಲಾಯಿತು.
Wednesday, 27 January 2016
Tuesday, 26 January 2016
ಗಣರಾಜ್ಯೋತ್ಸವ ಆಚರಣೆ
ನಮ್ಮ ಶಾಲೆಯಲ್ಲಿ 67 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ನಡೆದ ಧ್ವಜಾರೋಹಣವನ್ನು ವಾರ್ಡ್ ಸದಸ್ಯೆಯಾಗಿರುವ ಶ್ರೀಮತಿ ಶಶಿಕಲಾರವರು ನೆರವೇರಿಸಿದರು. ಶಾಲಾ ಆಡಳಿತ ಸಮಿತಿಯ ಅಧ್ಯಕ್ಷ ಶ್ರೀ ಕೃಷ್ಣಪ್ಷ ಬೆಂಗರೆ, ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ, ಶಾಲಿನಿ ಕೆ ಬೆಂಗರೆ, ಶ್ರೀ ಗಣಪತಿ ಶರ್ಮ ಉಪಸ್ಥಿತರಿದ್ದು ಶುಭವನ್ನು ಕೋರಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಸ್ವಾಗತಿಸಿ, ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ವಂದಿಸಿದರು. ಬಳಿಕ ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.
Monday, 25 January 2016
Saturday, 23 January 2016
ಶಾಲಾ ಶೈಕ್ಷಣಿಕ ಪ್ರವಾಸ 2015-16
2015-16 ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸವನ್ನು ತಾ. 22-01-2016 ನೇ ಶುಕ್ರವಾರದಂದು ನಡೆಸಲಾಯಿತು. ಕಣ್ಣೂರು ಕೋಟೆ, ಬೀಚ್, ಪರಶ್ಶಿನಕಡವು ಸ್ನೇಕ್ ಪಾರ್ಕ್, ಅರಕ್ಕಲ್ ಮ್ಯೂಸಿಯಂ, ಮಿಲ್ಮ ಹಾಲಿನ ಡೈರಿ ಮೊದಲಾದೆಡೆ ಸಂದರ್ಶಿಸಲಾಯಿತು. ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಿ, ಅಬ್ದುಲ್ ಮಜೀದ್, ಅಧ್ಯಾಪಿಕೆಯರಾದ ಶ್ರೀಮತಿ ಭವ್ಯಶ್ರೀ ಯನ್, ಶ್ರೀಮತಿ ಗೀತಾ, ಶಾಲಾ ಆಡಳಿತ ಸಮಿತಿ ಸದಸ್ಯರಾದ ಶ್ರೀ ರಾಮಚಂದ್ರ ಉದ್ಯಾವರ್, ಶಾಲಿನಿ ಕೆ ಬೆಂಗರೆ, ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ, ಶ್ರೀ ಗಣಪತಿ ಶರ್ಮ ನೇತೃತ್ವ ವಹಿಸಿ ಸಹಕರಿಸಿದರು.
Wednesday, 13 January 2016
'ವಿದ್ಯಾರಂಗೋತ್ಸವ 2015-16'
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆಯ ಕಾರ್ಯಕ್ರಮದ ಅಂಗವಾಗಿ ತರಗತಿ ಹಾಗೂ ಶಾಲಾ ಮಟ್ಟದಲ್ಲಿ ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥರವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಉಪಸ್ಥಿತರಿದ್ದು ಶುಭ ಕೋರಿದರು. ತರಗತಿ ಮಟ್ಟದಲ್ಲಿ ಚಟುವಟಿಕಗಳನ್ನು ನಡೆಸಿ ಮಕ್ಕಳನ್ನು ಆಯ್ಕೆ ಮಾಡಿ, ಬಳಿಕ ಶಾಲಾ ಮಟ್ಟದಲ್ಲಿ ನಡೆಸಲಾಯಿತು. ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಿ, ಅಧ್ಯಾಪಿಕೆಯರಾದ ಭವ್ಯಶ್ರೀ ಯನ್, ಗೀತಾ ಎ, ನಿಖಿಲ ರವರ ನೇತೃತ್ವದಲ್ಲಿ ತರಗತಿಗಳನ್ನು ನಡೆಸಲಾಯಿತು.
Subscribe to:
Posts (Atom)