Tuesday, 30 June 2015
ವಿದ್ಯಾರಂಗ ಕಲಾ ಸಾಹಿತ್ಯ ವೇದಿಕೆ ಹಾಗೂ ಬಾಲ ಸಭೆ ಉದ್ಘಾಟನೆ
Saturday, 27 June 2015
Friday, 26 June 2015
ವಿಶ್ವ ಮಾದಕ ವಸ್ತು ವಿರುದ್ಧ ದಿನ ಆಚರಣೆ
ವಿಶ್ವ ಮಾದಕ ವಸ್ತು ವಿರೋಧಿ ದಿನದ ಪ್ರಯುಕ್ತ ಮಾದಕ ವಸ್ತುಗಳ ದುಷ್ಪರಿಣಾಮಗಳ ಕುರಿತು ಮಕ್ಕಳಿಗೆ ತಿಳುವಳಿಕೆ ಮೂಡಿಸಲಾಯಿತು. ಮಾದಕ ವಸ್ತು ವಿರುದ್ಧ ಪ್ರತಿಜ್ಞೆಗೈಯಲಾಯಿತು.
Monday, 22 June 2015
2015-16 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆ
2015-16 ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಮಹಾಸಭೆಯು ಜರಗಿತು. ಕಾರ್ಯಕ್ರಮದಲ್ಲಿ ಕಳೆದ ಶೈಕ್ಶಣಿಕ ವರ್ಷದಲ್ಲಿ ಪಿ.ಟಿ.ಎ ಅಧ್ಯಕ್ಷರಾಗಿದ್ದ ಶ್ರೀ ಚಂದ್ರಶೇಖರ್, ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ವರದಿ ಮಂಡಿಸಿದರು. 2015-16 ನೇ ಸಾಲಿನ ಶಾಲಾ ರಕ್ಷಕ-ಶಿಕ್ಷಕ ಸಂಘದ ನೂತನ ಕಮಿಟಿ ರಚಿಸಲಾಯಿತು. ಅಧ್ಯಕ್ಷರಾಗಿ ಶ್ರೀ ಸದಾಶಿವ ಕಣ್ವತೀರ್ಥ, ಉಪಾಧ್ಯಕ್ಷೆಯಾಗಿ ಶ್ರೀಮತಿ ತಿರುಮಲೇಶ್ವರಿ ಭಟ್ ಅವಿರೋಧವಾಗಿ ಆಯ್ಕೆಯಾದರು. ಬಳಿಕ ನಡೆದ ಮಾತೃ ಸಂಘದ ಸಭೆಯಲ್ಲಿ ಈ ವರ್ಷದ ನೂತನ ಅಧ್ಯಕ್ಷೆಯಾಗಿ ಶ್ರೀಮತಿ ಕಮರುನ್ನೀಸ ತೂಮಿನಾಡು, ಉಪಾಧ್ಯಕ್ಷೆಯಾಗಿ ಶ್ರೀಮತಿ ಮಮತಾ ಕುಚ್ಚಿಕ್ಕಾಡು ಅವಿರೋಧವಾಗಿ ಆಯ್ಕೆಯಾದರು.
ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಕಲಿಕೋಪಕರಣಗಳ ವಿತರಣೆ
ಶಾಲೆಯ ಎಲ್ಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ಪುಸ್ತಕ ಹಾಗೂ ಕಲಿಕೋಪಕರಣಗಳ ವಿತರಣಾ ಕಾರ್ಯಕ್ರಮ ಇಂದು ಜರಗಿತು.
ಕಾರ್ಯಕ್ರಮದ
ಉದ್ಘಾಟನೆಯನ್ನು ಮಂಜೇಶ್ವರ
ಪಂಚಾಯತಿನ ಸದಸ್ಯ ಶ್ರೀ ಪವನ್
ಕುಮಾರ್ ಅಂಜರೆ ನೆರವೇರಿಸಿದರು.
ಅಧ್ಯಕ್ಷತೆಯನ್ನು
ಶಾಲಾ ಪ್ರಬಂಧಕ ಶ್ರೀ ವಿಶ್ವನಾಥ್
ಪಿ ಉದ್ಯಾವರ್ ವಹಿಸಿದ್ದರು.
ಶ್ರೀ ವಿಶಾಲ್ ಕೆ
ಬೆಂಗರೆಯವರು ಶಾಲೆಯ ಎಲ್ಲಾ
ಮಕ್ಕಳಿಗೆ ನೀಡಿದ ಉಚಿತ ಪುಸ್ತಕ
ಹಾಗೂ ಕಲಿಕೋಪಕರಣಗಳನ್ನು ಶ್ರೀ
ಕೃಷ್ಣಪ್ಪ ಬೆಂಗರೆ ಹಾಗೂ ಶ್ರೀಮತಿ
ಶಾಲಿನಿ ಕೆ ಬೆಂಗರೆ ದಂಪತಿ ನೀಡಿದರು.
ಕಾರ್ಯಕ್ರಮದಲ್ಲಿ
ಶ್ರೀ ಶ್ರೀನಿವಾಸ್ ಭಟ್ ಕಣ್ವತೀರ್ಥ, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್, ಯೋಗ ಸಾಧಕಿ ಶ್ರೀಮತಿ ಗಿರಿಜಾ ಯನ್ ಉದ್ಯಾವರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ 2014-15 ನೇ ಸಾಲಿನ ಒಂದನೇ ತರಗತಿ ಮಕ್ಕಳಿಗೆ ಸರಕಾರದಿಂದ ದೊರಕಿದ ಸಮವಸ್ತ್ರವನ್ನು ವಾರ್ಡ್ ಸದಸ್ಯ ಶ್ರೀ ಪವನ್ ಕುಮಾರ್ ಅಂಜರೆ ವಿತರಿಸಿದರು. ಶಾಲೆಯ ಉಳಿದ ಮಕ್ಕಳಿಗೆ ಸಮವಸ್ತ್ರವನ್ನು ಶಾಲಾ ಆಡಳಿತ ಸಮಿತಿ ನೀಡುವುದೆಂದು ಭರವಸೆ ನೀಡಲಾಯಿತು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಸ್ವಾಗತಿಸಿ, ಅಧ್ಯಾಪಿಕೆ ಶ್ರೀಮತಿ ಗೀತಾ ಎ ವಂದಿಸಿದರು. ಅಧ್ಯಾಪಕ ಜಯಪ್ರಶಾಂತ್ ಪಿ ಕಾರ್ಯಕ್ರಮ ನಿರೂಪಿಸಿದರು.
Saturday, 20 June 2015
Friday, 19 June 2015
Sunday, 14 June 2015
Friday, 12 June 2015
ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
'ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನ'ದ ಪ್ರಯುಕ್ತ ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಪ್ರತಿಜ್ಞೆಗೈಯಲಾಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಕಾರ್ಯಕ್ರಮ ನೆರವೇರಿಸಿಕೊಟ್ಟರು.
Tuesday, 9 June 2015
ನಾಡೋಜ ಡಾ| ಕಯ್ಯಾರ ಕಿಞಣ್ಣ ರೈ ರವರಿಗೆ 'ಶತಪೂರ್ತಿ ಸಂಭ್ರಮ'
ಹಿರಿಯ ಸಾಹಿತಿ, ಪಂಪ ಪ್ರಶಸ್ತಿ ಪುರಸ್ಕೃತ, ನಾಡೋಜ ಡಾ| ಕಯ್ಯಾರ ಕಿಞಣ್ಣ ರೈ ರವರ 'ಶತಪೂರ್ತಿ ಸಂಭ್ರಮ'ದ ಈ ಶುಭ ಸಂದರ್ಭದಲ್ಲಿ ಅವರಿಗೆ ನಮ್ಮ ಶಾಲಾ ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿ ವೃಂದದ ಪರವಾಗಿ ಗೌರವಪೂರ್ವಕವಾಗಿ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ.
ಈ ಸಂದರ್ಭದಲ್ಲಿ ಕಯ್ಯಾರರ ಕುರಿತು ಒಂದಿಷ್ಟು ಮಾಹಿತಿ...
ಕನ್ನಡ ನಾಡು, ಕನ್ನಡ ಭಾಷೆಯ ಬಗೆಗಿನ ತುಡಿತ, 'ಕನ್ನಡದ ಗಡಿ ಕಾಯೆ, ನುಡಿ ಕಾಯೆ ಓ ಬನ್ನಿ ಬೇಗ' ಎಂದು ಕರೆಯುತ್ತಾ ಕನ್ನಡಮ್ಮನ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಅಪ್ಪಟ ಕನ್ನಡ ಹೋರಾಟಗಾರ ಕಯ್ಯಾರ ಕಿಞಣ್ಣ ರೈ. ಇಷ್ಟು ವರ್ಷವೂ ಮಾತು, ಕೃತಿಗಳ ಮೂಲಕ ಕನ್ನಡಪರವಾದ ಹೋರಾಟದ ಬದುಕನ್ನು ಸಾಗಿಸಿ, ತಾನು ಹುಟ್ಟಿದ ಈ ಕಾಸರಗೋಡು ಎಂದಾದರೂ ಒಮ್ಮೆ ಕರ್ನಾಟಕವನ್ನು ಸೇರುವುದೆಂಬ ಹಂಬಲವನ್ನು ಈಗಲೂ ಹೊಂದಿದ್ದಾರೆ. ಆದರೆ ಈಗಿನ ಕನ್ನಡದ ಸ್ಥಿತಿಯನ್ನು ಕಂಡಾಗ ಕಯ್ಯಾರರಂತಹ ಅಪ್ಪಟ ಕನ್ನಡ ಪ್ರೇಮಿಗಳ ಅವಶ್ಯಕತೆ ಎಲ್ಲಾ ರಂಗದಲ್ಲೂ ಎದ್ದು ಕಾಣುತ್ತಿದೆ. ಹಾಗಂತ ಕನ್ನಡಭಿಮಾನಿಗಳು ಇಲ್ಲವೆಂದಲ್ಲ. ಆದರೆ ಕನ್ನಡಕ್ಕಾಗಿ ಸದಾ ತುಡಿಯುವ ಮನಸ್ಸುಗಳ ಸಂಖ್ಯೆಯಲ್ಲಿ ಕೊರತೆಯಿದೆ.
ಪೆರಡಾಲದಲ್ಲಿ 1915 ಜೂನ್ 8 ರಂದು ದುಗ್ಗಪ್ಪ ರೈ ಹಾಗೂ ದೈತಕ್ಕ ದಂಪತಿಗೆ ಹುಟ್ಟದ ಕಯ್ಯಾರರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಬದಿಯಡ್ಕದಲ್ಲಿ ಪಡೆದು ಬಳಿಕ ನೀರ್ಚಾಲು ಸಂಸ್ಕೃತ ಕಾಲೇಜು ಪ್ರೌಢ ಶಾಲೆಯಲ್ಲಿ ಸಂಸ್ಕೃತ ಮತ್ತು ಕನ್ನಡ ಭಾಷೆಯಲ್ಲಿ ವಿದ್ವಾನ್ ಪ್ರಶಸ್ತಿ ಪಡೆದರು. ಉಞಕ್ಕೆಯನ್ನು ಬಾಳ ಸಂಗಾತಿಯನ್ನಾಗಿ ಪಡೆದ ಇವರಿಗೆ ಆರು ಮಂದಿ ಪುತ್ರರು ಹಾಗೂ ಇಬ್ಬರು ಪುತ್ರಿಯರಿದ್ದಾರೆ.
1935 ರಲ್ಲಿ ಮಂಗಳೂರಿನಲ್ಲಿ ಪತ್ರಕರ್ತನಾಗಿ ದುಡಿದ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲೂ ಗುರುತಿಸಿಕೊಂಡಿದ್ದರು. ಬಳಿಕ ಪೆರಡಾಲ ಶಾಲೆಯಲ್ಲಿ ಅಧ್ಯಾಪಕ ವೃತ್ತಿಯನ್ನು ಪಡೆದು, ತಮ್ಮ ಕರ್ತವ್ಯನಿಷ್ಠೆ ಹಾಗೂ ಪ್ರಾಮಾಣಿಕತೆಗೆ 1961 ರಲ್ಲಿ ಇವರಿಗೆ 'ಉತ್ತಮ ಅಧ್ಯಾಪಕ' ಪ್ರಶಸ್ತಿಯನ್ನೂ ಪಡೆದರು.
ಕಯ್ಯಾರರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ. ಶ್ರೀಮುಖ, ಐಕ್ಯಗಾನ, ಶತಮಾನದ ಗಾನ, ಪಂಚಮಿ, ಚೇತನ, ಪುನರ್ನವ, ಕೊರಗ, ಗಂಧಾವತಿ ಹೀಗೆ ಹಲವಾರು ಕವಿತಾ ಸಂಕಲನವನ್ನು ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. 'ದುಡಿತವೇ ನನ್ನ ದೇವರು' ಎಂಬುದು ಇವರ ಆತ್ಮಕಥನವಾಗಿದೆ.
ಕಯ್ಯಾರರಿಗೆ ಹಲವಾರು ಪ್ರಶಸ್ತಿಗಳು ಅರಸಿ ಬಂದಿವೆ. ಇವರ ಬಹುಮುಖ ವ್ಯಕ್ತಿತ್ವವನ್ನು ಕಂಡು ಮಂಗಳೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಹಂಪಿ ಕನ್ನಡ ವಿದ್ಯಾಲಯ ನಾಡೋಜ ಪದವಿ ನೀಡಿದೆ. 2013 ರಲ್ಲಿ ಕರ್ನಾಟಕ ಸರಕಾರ ಪಂಪ ಪ್ರಶಸ್ತಿ ನೀಡಿ ಗೌರವಿಸಿದೆ. ಇದಲ್ಲದೆ ಹಲವಾರು ಸಂಘ ಸಂಸ್ಥೆಗಳು ಇವರಿಗೆ ಬಿರುದು ಬಾವಲಿಗಳನ್ನು ನೀಡಿ ಗೌರವಿಸಿದೆ. ಅಲ್ಲದೆ ಮಂಗಳೂರಿನಲ್ಲಿ ಜರಗಿದ 66 ನೇ ಅಖಿಲ ಭಾರತ ಜನಪದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಸ್ಥಾನ, ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಅಧ್ಯಕ್ಷತೆ ಹೀಗೆ ವಿವಿಧೆಡೆಯಲ್ಲಿ ಗೌರವಕ್ಕೆ ಭಾಜನರಾಗಿದ್ದಾರೆ.
'ಶತಮಾನದ ಗಾನ'ವನ್ನು ಪಸರಿಸಿದ ಶತಮಾನದ ಕವಿ ಕಯ್ಯಾರರು ಇನ್ನಷ್ಟು ವರ್ಷಗಳು ನಮ್ಮೊಂದಿಗಿದ್ದು ಕನ್ನಡದ ಕಂಪನ್ನು ಎಲ್ಲೆಡೆ ಪಸರಿಸುವಂತಾಗಲಿ ಎಂಬುದು ಪ್ರತಿಯೊಬ್ಬ ಕನ್ನಡ ತಾಯಿಯ ಮಕ್ಕಳ ಹಾರೈಕೆ.
Friday, 5 June 2015
Subscribe to:
Posts (Atom)