....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Monday 1 June 2015

ಸಂಭ್ರಮದ ಶಾಲಾ ಪ್ರವೇಶೋತ್ಸವ

      2015-16 ನೇ ಶೈಕ್ಷಣಿಕ ವರ್ಷದ ಮೊದಲ ದಿನವನ್ನು 'ಪ್ರವೇಶೋತ್ಸವ' ಕಾರ್ಯಕ್ರಮದೊಂದಿಗೆ ಬಹಳ ಸಂಭ್ರಮದಿಂದ ಆಚರಿಸಲಾಯಿತು.
       ಆ ಪ್ರಯುಕ್ತ ಹೊಸದಾಗಿ ಶಾಲೆಗೆ ಸೇರ್ಪಡೆಗೊಂಡ ಮಕ್ಕಳನ್ನು ಆಕರ್ಷಕ ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು. ಬಳಿಕ ನಡೆದ ಸಭಾಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘದ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ ವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಹಿತೈಷಿ ಶ್ರೀ ಶ್ರೀನಿವಾಸ್ ಭಟ್ ಕಣ್ವತೀರ್ಥ,ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘದ ಕೋಶಾಧಿಕಾರಿ ಶ್ರೀ ವಿಶ್ವನಾಥ್ ಸಿ ಉದ್ಯಾವರ್, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹೊಸದಾಗಿ ಸೇರ್ಪಡೆಗೊಂಡ ಮಕ್ಕಳಿಗೆ ಬಲೂನ್ ಹಾಗೂ ಕಲಿಕಾ ಕಿಟ್ ವಿತರಣೆ ಮಾಡಲಾಯಿತು. ಶಾಲಾ ಅಧ್ಯಾಪಕಿಯರಾದ ಶ್ರೀಮತಿ ಭವ್ಯಶ್ರೀ ಯನ್, ಶ್ರೀಮತಿ ಗೀತಾ ರವರು ಪ್ರವೇಶೋತ್ಸವ ಗೀತೆಯನ್ನು ಹಾಡುವ ಮೂಲಕ ಮಕ್ಕಳಿಗೆ ಸ್ವಾಗತವನ್ನು ಕೋರಿದರು.
         ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ರವರು ಸ್ವಾಗತಿಸಿ, ಅಧ್ಯಾಪಿಕೆ ಶ್ರೀಮತಿ ಭವ್ಯಶ್ರೀ ಯನ್ ವಂದಿಸಿದರು. ಅಧ್ಯಾಪಕ ಜಯಪ್ರಶಾಂತ್ ಪಿ ರವರು ಕಾರ್ಯಕ್ರಮ ನಿರೂಪಿಸಿದರು. ಎಲ್ಲರಿಗೂ ಲಘು ಪಾನೀಯ ಹಾಗೂ ಸಿಹಿತಿಂಡಿ ವಿತರಿಸಲಾಯಿತು.













No comments:

Post a Comment