....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Wednesday 1 June 2016

ಶಾಲಾ ಪ್ರವೇಶೋತ್ಸವ 2016-17

             2016-17 ನೇ ಸಾಲಿನ ಶಾಲಾ ಪ್ರವೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಆ ಪ್ರಯುಕ್ತ ನವಾಗತ ಮಕ್ಕಳನ್ನು ಮೆರವಣಿಗೆಯ ಮೂಲಕ ಬರಮಾಡಿಕೊಳ್ಳಲಾಯಿತು‌. ಶಾಲಾ ಅಸೆಂಬ್ಲಿಯ ಬಳಿಕ ನಡೆದ ಸಭಾಕಾರ್ಯಕ್ರಮವನ್ನು ವಾರ್ಡ್ ಸದಸ್ಯೆ ಶ್ರೀಮತಿ ಶಶಿಕಲಾರವರು ಉದ್ಘಾಟಿಸಿದರು. ಶಾಲಾ ಆಡಳಿತ ಸಮಿತಿ ಅಧ್ಯಕ್ಷ ಶ್ರೀ ಕೃಷ್ಣಪ್ಪ ಬೆಂಗರೆ ಅಧ್ಯಕ್ಷತೆ ವಹಿಸಿದ್ದರು. ಹೊಸದಾಗಿ.ಸೇರಿದ ಮಕ್ಕಳಿಗೆ ಕಲಿಕಾ ಕಿಟ್'ನೊಂದಿಗೆ ಬಲೂನ್ ಹಾಗೂ ಬ್ಲಾಗ್'ನ್ನು ನೀಡಲಾಯಿತು. ಸಮಾರಂಭದಲ್ಲಿ ಶಾಲಾ ಪಿ. ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ, ಬೋವೀ ಮಹಿಳಾ ಸಂಘದ ಉಪಾಧ್ಯಕ್ಷೆ ಶ್ರೀಮತಿ ಶಾಲಿನಿ ಕೆ ಬೆಂಗರೆ ಉಪಸ್ಥಿತರಿದ್ದು ಶುಭ ಕೋರಿದರು‌. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಸ್ವಾಗತಿಸಿ ಅಧ್ಯಾಪಿಕೆ ಶ್ರೀಮತಿ ಗೀತಾ ಎ ವಂದಿಸಿದರು. ಶಾಲಾ ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ. ಕಾರ್ಯಕ್ರಮ ನಿರೂಪಿಸಿದರು.












No comments:

Post a Comment