....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Thursday 23 June 2016

ಶಾಲಾ ಚುನಾವಣೆ 2016-17

            2016-17 ನೇ ಸಾಲಿನ ಶಾಲಾ ನಾಯಕನನ್ನು ಆಯ್ಕೆ ಮಾಡಲು ಶಾಲಾ ಚುನಾವಣೆಯನ್ನು ನಡೆಸಲಾಯಿತು. ಆ ಪ್ರಯುಕ್ತ ಚುನಾವಣಾ ಮುನ್ನಾ ದಿನ ಸ್ಪರ್ಧಿಸುವ ಅಭ್ಯರ್ಥಿಗಳು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿಯವರಿಗೆ ತಮ್ಮ ನಾಮಪತ್ರವನ್ನು ಸಲ್ಲಿಸಿದರು. ಚುನಾವಣಾ ದಿನ ಶಾಲೆಯು ರಂಗೇರಿತ್ತು. ಮತದಾರರು ಸರದಿ ಸಾಲಿನಲ್ಲಿ ಬಂದು ತಮ್ಮ ಬೆರಳಿಗೆ ಮತದಾನದ ಗುರುತನ್ನು ಹಾಕಿ ಗೌಪ್ಯ ಮತದಾನದ ಮೂಲಕ ಮತ ಚಲಾಯಿಸಿದರು. ಶಾಲಾ ಆಡಳಿತ ಸಮಿತಿ ಸದಸ್ಯರು, ಪಿ.ಟಿ.ಎ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಮತದಾನದ ಬಳಿಕ ಮತ ಎಣಿಕೆಯನ್ನು ಮುಖ್ಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಶಾಲಾ ಮುಖ್ಯೋಪಾಧ್ಯಾಯಿನಿಯವರ ನೇತೃತ್ವದಲ್ಲಿ ನಡೆಸಲಾಯಿತು. ಬಳಿಕ ಫಲಿತಾಂಶವನ್ನು ಘೋಷಣೆ ಮಾಡಲಾಯಿತು. ಶಾಲಾ ನಾಯಕಿಯಾಗಿ ಕುಮಾರಿ ನಿಶ್ಮಿತ ಉಪನಾಯಕಿಯಾಗಿ ಪಿಝಾ ಫಾತಿಮ ಆಯ್ಕೆಯಾದರು. ಆಗ ವಿಜೇತ ಅಭ್ಯರ್ಥಿಗಳ ಹಾಗೂ ಬೆಂಬಲಿಗರ ಹರ್ಷೋಧ್ಘಾರ ಮುಗಿಲು ಮುಟ್ಟಿತ್ತು. ಸೋತ ಅಭ್ಯರ್ಥಿಗಳ ಕಣ್ಣಂಚಲ್ಲಿ ನೀರು ತುಂಬಿ ನಿರಾಶೆಯನ್ನು ವ್ಯಕ್ತಪಡಿಸಿದರು. ಬಳಿಕ ವಿಜೇತ ಅಭ್ಯರ್ಥಿಗಳಿಗೆ ಮಾಲೆ ಹಾಗೂ ಹೂಗುಚ್ಛವನ್ನು ನೀಡಿ ಅಭಿನಂದಿಸಲಾಯಿತು. ವಿಜೇತ ಅಭ್ಯರ್ಥಿಗಳ ಬೆಂಬಲಿಗರಿಂದ ವಿಜಯ ಯಾತ್ರೆಯು ನಡೆಯಿತು. ನೂತನ ನಾಯಕರಿಗೆ ಪ್ರಮಾಣ ವಚನ ಕಾರ್ಯಕ್ರಮ ನಡೆಸಲಾಯಿತು.


















No comments:

Post a Comment