ತಾ.
02-06-2014 ನೇ ಸೋಮವಾರದಂದು
ನಮ್ಮ ಶಾಲೆಯಲ್ಲಿ ಪ್ರವೇಶೋತ್ಸವವನ್ನು
ಬಹಳ ಸಂಭ್ರಮದಿಂದ ಆಚರಿಸಲಾಯಿತು. ಶಾಲೆಯಲ್ಲಿ
ಪ್ರವೇಶೋತ್ಸವದ ಅಂಗವಾಗಿ ಮೆರವಣಿಗೆ
ನಡೆಯಿತು. ಬಳಿಕ
ನಡೆದ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು
ಉದ್ಯಾವರ ಬೋವಿ ವಿದ್ಯಾದಾಯಿನಿ
ಸಂಘ, ಉದ್ಯಾವರ ಇದರ
ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ
ಬೆಂಗರೆಯವರು ನೆರವೇರಿಸಿದರು.
ಅಧ್ಯಕ್ಷತೆಯನ್ನು
ಶಾಲಾ ಪ್ರಬಂದಕ ಶ್ರೀ ವಿಶ್ವನಾಥ
ಪಿ ಉದ್ಯಾವರ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ
ಉದ್ಯಾವರ ಬೋವಿ ವಿದ್ಯಾದಾಯಿನಿ
ಸಂಘ'ದ ಕೋಶಾಧಿಕಾರಿ
ಶ್ರೀ ವಿಶ್ವನಾಥ ಸಿ ಉದ್ಯಾವರ್,
ಬೋವಿ ಮಹಿಳಾ ಸಂಘದ
ಪ್ರಧಾನ ಕಾರ್ಯದರ್ಶಿ ಶ್ರೀಮತಿ
ಶಾಲಿನಿ ಕೆ ಬೆಂಗರೆ, ಪಿ.ಟಿ.ಎ
ಅಧ್ಯಕ್ಷ ಶ್ರೀ ಚಂದ್ರಶೇಖರ್,
ಮಾತೃ ಸಂಘದ ಅಧ್ಯಕ್ಷೆ
ಶ್ರೀಮತಿ ಗೀತಾ ಉಪಸ್ಥಿತರಿದ್ದರು. ಶಿಕ್ಷಣ
ಸಚಿವರ ಶಾಲಾ ಪ್ರವೇಶೋತ್ಸವದ
ಸಂದೇಶವನ್ನು ಅಧ್ಯಾಪಕ ಶ್ರೀ
ಜಯಪ್ರಶಾಂತ್ ಪಿ ಯವರು ಓದಿದರು.
ಬಳಿಕ 'ರಕ್ಷಣೆಯ
ಪಾಠಗಳು' ಎಂಬ
ಕೈಪಿಡಿಯನ್ನು ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಜಲಜಾಕ್ಷಿ ಎ ಯವರು
ಬಿಡುಗಡೆಗೊಳಿಸಿದರು. ಶಾಲಾ
ಅಧ್ಯಾಪಿಕೆ ಶ್ರೀಮತಿ ಗೀತಾ ಎ
ಮಕ್ಕಳನ್ನು ಪ್ರವೇಶೋತ್ಸವ
ಗೀತೆಯನ್ನು ಹಾಡುವ ಮೂಲಕ
ಸ್ವಾಗತಿಸಿದರು. ಹೊಸದಾಗಿ
ಸೇರ್ಪಡೆಯಾದ ಮಕ್ಕಳಿಗೆ ಕಲಿಕೋಪಕರಣದ
ಕಿಟ್, ಬ್ಯಾಗ್ ಹಾಗೂ
ಕೊಡೆಗಳನ್ನು ವಿತರಿಸಲಾಯಿತು. ರಕ್ಷಕರ
ಪರವಾಗಿ ಉಸ್ಮಾನ್ ರವರು ಮಾತನಾಡಿನರು.
ಶಾಲಾ ಮುಖ್ಯೋಪಾಧ್ಯಾಯಿನಿ
ಶ್ರೀಮತಿ ಜಲಜಾಕ್ಷಿ ಎ ಯವರು
ಸ್ವಾಗತಿಸಿ, ಶಾಲಾ
ಅಧ್ಯಾಪಿಕೆಯಾದ ಶ್ರೀಮತಿ ಗೀತಾ
ಎ ವಂದಿಸಿದರು. ಅಧ್ಯಾಪಕ
ಶ್ರೀ ಜಯಪ್ರಶಾಂತ್ ಪಿ ಯವರು
ಕಾರ್ಯಕ್ರಮ ನಿರೂಪಿಸಿದರು.









No comments:
Post a Comment