....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Wednesday, 30 July 2014

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಹಾಗೂ ನೋಟ್ ಪುಸ್ತಕ ವಿತರಣೆ


       ತಾ. 13-06-2014 ನೇ ಶುಕ್ರವಾರದಂದು ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ, ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಸಲಾಯಿತು. ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ, ಮುಂಬೈಯವರು ನೀಡಿದ ಸಮವಸ್ತ್ರ ಹಾಗೂ ನೋಟ್ ಪುಸ್ತಕವನ್ನು ಉದ್ಯಾವರ ಬೋವಿ ವಿದ್ಯಾದಾಯಿನಿ ಸಂಘ, ಉದ್ಯಾವರ ಇದರ ಅಧ್ಯಕ್ಷರಾದ ಶ್ರೀ ಕೃಷ್ಣಪ್ಪ ಬೆಂಗರೆಯವರು ವಿತರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಬಂದಕ ಶ್ರೀ ವಿಶ್ವನಾಥ ಪಿ ಉದ್ಯಾವರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಜೇಶ್ವರ ಪಂಚಾಯತ್ ಕ್ಷೇಮಾಭಿವೃದ್ಧಿ ಸ್ಥಾಯೀ ಸಮಿತಿಯ ಅಧ್ಯಕ್ಷರಾದ ಶ್ರೀ ಪವನ್ ಕುಮಾರ್ ಅಂಜರೆ, ಬೋವಿ ಮಹಿಳಾ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾಲಿನಿ ಕೆ ಬೆಂಗರೆ, ಪಿ.ಟಿ.ಎ ಅಧ್ಯಕ್ಷ ಶ್ರೀ ಚಂದ್ರಶೇಖರ್ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಲಜಾಕ್ಷಿ ಎ ಯವರು ಸ್ವಾಗತಿಸಿ, ಶಾಲಾ ಅಧ್ಯಾಪಿಕೆಯಾದ ಶ್ರೀಮತಿ ಗೀತಾ ಎ ವಂದಿಸಿದರು. ಅಧ್ಯಾಪಕ ಶ್ರೀ ಜಯಪ್ರಶಾಂತ್ ಪಿ ಯವರು ಕಾರ್ಯಕ್ರಮ ನಡೆಸಿಕೊಟ್ಟರು.








No comments:

Post a Comment